More

    ಸಂವಹನ ಸಾಮರ್ಥ್ಯ ಸುಧಾರಣೆ ಬಹುಮುಖ್ಯ

    ಶಿವಮೊಗ್ಗ: ಕೆಲಸ ಹುಡುಕುವ ಸಂದರ್ಭಗಳಲ್ಲಿ ಅಭ್ಯರ್ಥಿಗಳು ತಾಂತ್ರಿಕವಾಗಿ ಎಷ್ಟೇ ಜ್ಞಾನ ಹೊಂದಿದ್ದರೂ ಅದನ್ನು ಸಂದರ್ಶನದ ವೇಳೆ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಂವಹನ ಸಾಮರ್ಥ್ಯ ಸುಧಾರಿಸಿಕೊಳ್ಳುವುದು ಮುಖ್ಯ ಎಂದು ನಾವೆಲ್ ಹೈಯರ್ ಕಂಪನಿ ಸಂಸ್ಥಾಪಕ ಕೃಷ್ಣಚೈತನ್ಯ ಹೇಳಿದರು.

    ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ನಲ್ಲಿ ಸಂವಹನ ಸಾಮರ್ಥ್ಯ ಅಭಿವೃದ್ಧಿ ಸ್ಟುಡಿಯೋ (ಸಿಸಿಡಿಎಸ್) ಉದ್ಘಾಟಿಸಿ ಮಾತನಾಡಿದ ಅವರು, ಪಿಇಎಸ್ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆ ಮೂಲಕ ಇಂಗ್ಲಿಷ್ ಸಂವಹನ ಕೌಶಲ ಅಭಿವೃದ್ಧಿಪಡಿಸಲು ಒಂದು ವಿಶಿಷ್ಟ ವೇದಿಕೆ ಒದಗಿಸಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ನಾವೆಲ್ ಹೈಯರ್ ಕಂಪನಿ ಎವಿಪಿ ವೆಂಕಟ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಕಲಿತ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಇನ್ನೊಬ್ಬರೊಂದಿಗೆ ಸಂಹವನ ನಡೆಸಲು ಈ ರೀತಿಯ ವೇದಿಕೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
    ಪಿಇಎಸ್‌ಐಟಿಎಂ ಪ್ರಾಚಾರ್ಯ ಡಾ. ಬಿ.ಎನ್.ಯುವರಾಜು ಮಾತನಾಡಿ, ದೈನಂದಿನ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಸಾಧನಗಳೊಂದಿಗೆ ವ್ಯವಹರಿಸಲು ಸಂವಹನ ಮಹತ್ವದ್ದು ಎಂದರು.
    ಪಿಇಎಸ್ ಟ್ರಸ್ಟ್ ಕೆರಿಯರ್ ಡೆವಲಪ್ಮೆಂಟ್ ಸೆಂಟರ್ ಮುಖ್ಯಸ್ಥ ಡಾ.ಟಿ.ಎಂ.ಪ್ರಸನ್ನಕುಮಾರ್ ಮಾತನಾಡಿ, ಶೈಕ್ಷಣಿಕ ಮತ್ತು ವೃತ್ತಿಪರ ಯಶಸ್ಸಿಗೆ ಅಗತ್ಯವಾದ ಸಂವಹನ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಸಿಸಿಡಿಎಸ್ ಸ್ಟುಡಿಯೋ ಹೊಂದಿದೆ. ಪ್ರಾಯೋಗಿಕ ಕಲಿಕೆ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಸಂವಹನದಲ್ಲಿ ನಿರರ್ಗಳತೆ ಮತ್ತು ಆತ್ಮವಿಶ್ವಾಸವನ್ನು ಈ ಮೂಲಕ ಬೆಳೆಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅವಕಾಶಕ್ಕೆ ಏನು ಮಾಡಬೇಕು?
    ಉತ್ತಮ ಸಂವಹನ ಕೌಶಲ ಹೊಂದಲು ಮೊದಲು ಕೇಳುಗನಾಗಬೇಕು. ಸಂವಹನ ನಡೆಸುವಾಗ ವ್ಯಕ್ತಿಯ ಹಾವಭಾವ, ಧ್ವನಿ ತುಂಬಾ ಮಹತ್ತರ ಪಾತ್ರವಹಿಸುತ್ತದೆ. ಸಂದರ್ಶನ ಸಮಯದಲ್ಲಿ ಉದ್ಯೋಗ ಅರ್ಜಿ ಅಥವಾ ರೆಸ್ಯುಮ್ಗಳು ಸಂವಹನಕಾರರಾಗಿ ಕಾರ್ಯನಿರ್ವಹಿಸುತ್ತವೆ. ಅಂತಹ ಸಮಯದಲ್ಲಿ ಅದರಲ್ಲಿ ಬರೆದ ವಿಷಯಗಳು ಎಷ್ಟು ಸ್ಪಷ್ಟವಾಗಿವೆ ಎಂಬುದರ ಆಧಾರದ ಮೇಲೆ ಆಯ್ಕೆಯಾಗುವ ಅವಕಾಶ ಅಷ್ಟೇ ಹೆಚ್ಚಾಗಿರುತ್ತದೆ ಎಂದು ಪಿಇಎಸ್ ಟ್ರಸ್ಟ್ ಮುಖ್ಯ ಸಂಯೋಜಕ ಆಡಳಿತಾಧಿಕಾರಿ ಡಾ. ಆರ್.ನಾಗರಾಜ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts