More

    ಸುಧಾರಾಣಿ 28 ವರ್ಷಗಳ ಹಿಂದೆ ನಟಿಸಿದ್ದ ಅರಗಿಣಿ ಚಿತ್ರದ ಸೆಟ್​​​​​ನಲ್ಲಿ ನಡೆದ ಘಟೆನೆ ಬಗ್ಗೆ ನಿರ್ದೇಶಕರು ಹೇಳಿದ್ದೇನು..? 3 ಸಾವಿರ ಜನ ನಿಬ್ಬೆರಗಾಗಿದ್ದು ಏಕೆ?

    ನಟಿ ಸುಧಾರಾಣಿ ಅವರು ನಾಡು ಕಂಡು ಅದ್ಭುತ ನಟಿ. ಕನ್ನಡದ ಮೇರು ನಟರ ಜೊತೆ ನಾಯಕಿಯಾಗಿ ಬಣ್ಣ ಹಚ್ಚಿರುವ ಸುಧಾರಾಣಿ ನಟನೆಗೆ ಮನಸೋಲದವರೇ ಇಲ್ಲ. 1988ರಲ್ಲಿ ತೆರೆ ಕಂಡ ‘ಗಂಡ ಮನೆ ಮಕ್ಕಳು’ ಚಿತ್ರದಲ್ಲಿ ಹೆಣ್ಣುಮಗಳಾಗಿ ತಾಯಿಯ ಅಂತ್ಯ ಸಂಸ್ಕಾರ ಮಾಡುವ ಪಾತ್ರದಲ್ಲಿ ಅವರು ಅಭಿನಯಿಸಿದ್ದರು. ಈ ಚಿತ್ರದಲ್ಲಿ ಶ್ರೀನಾಥ್, ರಮೇಶ್ ಅರವಿಂದ್, ದ್ವಾರಕೀಶ್ ನಟಿಸಿದ್ದರು.


    ‘ಅವನೇ ನನ್ನ ಗಂಡ’ ಚಿತ್ರ:
    1989ರಲ್ಲಿ ತೆರೆ ಕಂಡ ‘ಅವನೇ ನನ್ನ ಗಂಡ’ ಚಿತ್ರದಲ್ಲಿ ವಿಧವಾ ಮರುವಿವಾಹದ ಮಹತ್ವ ಸಾರುವ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರದಲ್ಲಿ ಕಾಶೀನಾಥ್, ವನಿತಾ ವಾಸು, ಪ್ರಮೀಳಾ ಜೋಶಾಯ್ ನಟಿಸಿದ್ದರು.


    ಅದಾದ ನಂತರ 1995ರಲ್ಲಿ ತೆರೆ ಕಂಡ ‘ಅರಗಿಣಿ’ ಚಿತ್ರದಲ್ಲಿ ದೇವದಾಸಿ ಪದ್ಧತಿಯಿಂದ ಹೊರಬರುವ ಸಾಹಸಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಹೀರೋ ಆಗಿದ್ದರು. ಇದೀಗ 1995ರಲ್ಲಿ ಸುಧಾರಾಣಿ ನಟಿಸಿದ್ದ ಅರಗಿಣಿ ಸನಿಮಾದ ಸ್ವಾರಸ್ಯಕರ ಘಟನೆಯ ವಿಚಾರವಾಗಿ ಚಿತ್ರದ ನಿರ್ದೇಶಕ ಪಿ.ಎಚ್​. ವಿಶ್ವನಾಥ್​​​ ಮಾತನಾಡಿದ್ದಾರೆ.


    ನಿರ್ದೇಶಕರು ಹೇಳಿದ್ದೇನೆ?
    ಸುಧಾರಾಣಿ ಚಿಕ್ಕ ವಯಸ್ಸಿನಲ್ಲಿ ಅರಗಿಣಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಚಿಕ್ಕ ವಯಸ್ಸಿನ ಕಲಾವಿದೆಯ ಅಭಿನಯ ನೋಡಿ 3000 ಜನ ನಿಬ್ಬೆರಗಾಗಿ 5 ನಿಮಿಷ ಚಪ್ಪಾಳೆ ತಟ್ಟಿದ್ರು ಅಂದ್ರೆ ಆವರು ಅದೆಂಥ ಅದ್ಭುತ ಕಲಾವಿದೆ ಆಗಿದ್ದಾರೆ, ಅವರ ಪ್ರತಿಭೆ, ಅಭಿನಯದ ಮೇಲೆ ಅವರಿಗಿದ್ದ ಶ್ರದ್ಧೆ ಭಕ್ತಿ ಹೇಗಿತ್ತು ಅಂತ ಅರ್ಥ ಮಾಡಿಕೊಳ್ಳಬಹುದು. ಅಷ್ಟು ಜನರಿಂದ ಸಿಕ್ಕ ಆ ಪ್ರತಿಕ್ರಿಯೆ ಒಬ್ಬ ಕಲಾವಿದೆಗೆ ಯಾವ ಅವಾರ್ಡ್​​​ಗಿಂತಲೂ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಪ್ರತಿಭೆ ಸುಧಾರಾಣಿಯವರು. ಅಪರೂಪದ ಪ್ರತಿಭೆ ಸುಧಾರಾಣಿಯವರಿಗೆ ವಂದನೆಗಳು ಎಂದು ಮಹೇಳಿದ್ದಾರೆ.
    ಈ ರೀತಿಯಾಗಿ ನಿರ್ದೇಶಕರು ಹೇಳಿದ ಮಾತುಗಳಿಗೆ ಇನ್ಸ್​​ಟಾಗ್ರಾಂನಲ್ಲಿ ಸಾಕಷ್ಟು ಕಾಮೆಂಟ್​​​ಗಳೂ ಬರುತ್ತಿವೆ.

    ಆವಾಗಿನ ಚಿತ್ರಗಳು ಸಮಾಜಕ್ಕೆ ಏನಾದ್ರು ಸಂದೇಶ ಕೊಡೊ ಹಾಗಿರ್ತಿದ್ವು ಅದಕ್ಕೆ ನೀವು ಅಜರಾಮರ ಆಗಿರ್ತೀರ ಸುಧಾ ಅಮ್ಮ ಎಂದು ಓರ್ವ ಬಳಕೆದಾರರು ಬರೆದಿದ್ದಾರೆ. ಸದ್ಯ ದಶಕಗಳ ಬಳಿಕ ಸುಧಾರಾಣಿಯವರ ನಟನೆಗೆ 3000 ಜನ ನಿಬ್ಬೆರಗಾಗಿ ಚಪ್ಪಾಳೆ ತಟ್ಟಿದ ವಿಚಾರ ಮುನ್ನೆಲೆಗೆ ಬಂದಿದ್ದು, ಜನ ಅವರ ನಟನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts