ಕನಕ ಭವನ ನಿರ್ಮಾಣ ಯರಗಟ್ಟಿ:

 ಯರಗಟ್ಟಿ ಪಟ್ಟಣದಲ್ಲಿ ಕನಕ ಜಯಂತಿ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಶಂಕರ ಇಟ್ನಾಳ, ಬಸವರಾಜ ಬಸಳಿಗುಂದಿ ಇತರರು ಇದ್ದರು.
ಯರಗಟ್ಟಿ ಪಟ್ಟಣದಲ್ಲಿ ಕನಕ ಜಯಂತಿ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಶಂಕರ ಇಟ್ನಾಳ, ಬಸವರಾಜ ಬಸಳಿಗುಂದಿ ಇತರರು ಇದ್ದರು.
Published on
ಯರಗಟ್ಟಿ: ಯರಗಟ್ಟಿ ಮತ್ತು ಸವದತ್ತಿ ಪಟ್ಟಣದಲ್ಲಿ ತಲಾ 5 ಕೋಟಿ ರೂ.ಗಳಲ್ಲಿ ಕನಕ ಭವನ ನಿರ್ಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಭಕ್ತ ಕನಕದಾಸ ಜಯಂತ್ಯುತ್ಸವ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂ ಸೋಮವಾರ ಹಮ್ಮಿಕೊಂಡ ತಾಲೂಕು ಮಟ್ಟದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಜೂರು ಮಾಡಿಸಿಕೊಳ್ಳಲಾಗುವುದು ಎಂದರು. ನಿವೃತ್ತ ಪ್ರಾಚಾರ್ಯ ವೈ.ಎಂ.ಯಾಕೊಳ್ಳಿ ಮಾತನಾಡಿದರು. ಶಿವಾನಂದ ಸ್ವಾಮಿಗಳು, ಗಣಪತಿ ಮಹಾರಾಜರು, ಲ್ಮಣ ಅಜ್ಜವರು, ಗಂಗಾಧರ ಸ್ವಾಮಿಗಳು, ಬೆಮುಲ್​ ನಿರ್ದೇಶಕ ಶಂಕರ, ತಹಸೀಲ್ದಾರ್​ರಾದ ಎಂ.ವಿ. ಗುಂಡಪ್ಪಗೋಳ, ಮಲ್ಲಿಕಾರ್ಜುನ ಹೆಗ್ಗನ್ನವರ, ಮುಖ್ಯಾಧಿಕಾರಿ ಮಹೇಶ್​ ಭಜಂತ್ರಿ, ವಿಠ್ಠಲ ತಡಸಲುರ, ಬಸವರಾಜ ಬಸಳಿಗುಂದಿ, ಡಿ.ಡಿ.ಟೋಪೋಜಿ, ಮಲಿಕಸಾಬ್​ ಭಾಗವಾನ, ಚಾಯಪ್ಪ ಹುಂಡೆಕರ, ನೀಲಕಂಠ ಸಿದ್ದಬಸನವರ, ಪ್ರಕಾಶ ವಾಲಿ, ಆರ್​.ಕೆ.ಪಟಾತ, ವಿಠ್ಠಲ ಬಂಟನೂರ, ಸಂತೋಷ ಹಾದಿಮನಿ, ಮುದಕಪ್ಪ ದಳವಾಯಿ, ಪುಂಡಲೀಕ ಮೇಟಿ, ಎ್​.ಡಿ.ಹದ್ದನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net