ಕಮಲ​ ಹಾಸನ್​​ಗೆ ರಜನಿಕಾಂತ್​ ಜತೆ ಮೈತ್ರಿ ಇಲ್ಲ? ಓವೈಸಿ ಕೈ ಹಿಡಿಯುವ ಸಾಧ್ಯತೆ!

chennui
Published on

ಚೆನ್ನೈ: ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಸನ್​ ಅವರ ಪಕ್ಷವೂ ಸ್ಪರ್ಧಿಸಲಿದೆ. ಮಕ್ಕಳ ನೀದಿಮಯಂ ಪಕ್ಷದ ಸಂಸ್ಥಾಪಕರಾಗಿರುವ ಅವರು ರಜನಿಕಾಂತ್​ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ ರಜನಿಕಾಂತ್​ ಜತೆ ಮೈತ್ರಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಮಾತುಗಳೂ ಇದೀಗ ಕೇಳಿಬರಲಾರಂಭಿಸಿವೆ.

ಭಾನುವಾರ ಮಧುರೈನಲ್ಲಿ ಪಕ್ಷದ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಹೊಸದೊಂದು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ಮೈತ್ರಿಗಳು ಮುರಿಯುತ್ತವೆ ಹಾಗೂ ಹೊಸ ಮೈತ್ರಿಗಳು ಆಗುತ್ತವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದೀಗ ಕಮಲ ಹಾಸನ್​ ಅವರ ಹೇಳಿಕೆಯ ಬಗ್ಗೆ ಅನೇಕ ಚರ್ಚೆಗಳು ಆರಂಭವಾಗಿವೆ. ಎಐಎಂಐಎಂ ಪಕ್ಷದ ಮುಖ್ಯಸ್ಥ ಓವೈಸಿ ಅವರು ಕಮಲ ಹಾಸನ್​ ಜತೆ ಮೈತ್ರಿ ಮಾಡಿಕೊಳ್ಳಲಿದ್ದು, 25 ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿವೆ.

ತಮಿಳುನಾಡಿನ ಹಲವೆಡೆ ಕಮಲ ಹಾಸನ್​ಗೆ ಪ್ರಚಾರ ಅಭಿಯಾನ ನಡೆಸಲು ಸರ್ಕಾರ ಅನುಮತಿ ನೀಡದಿರುವುದರ ಕುರಿತು ಮಾತನಾಡಿರುವ ಕಮಲ ಹಾಸನ್​, 'ಇಂತಹ ಅಡೆತಡೆಗಳು ನಮಗೆ ಹೊಸತೇನಲ್ಲ. ನಾವು ಕರೊನಾ ನಿಯಮಗಳನ್ನು ಪಾಲಿಸುತ್ತಲೇ ಜನರನ್ನು ತಲುಪಲು ಸಿದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net