ಟಿಕೆಟ್​ ವಿವಾದ; ಕೆಲಸ ತೊರೆದ ಮಹಿಳಾ ಬಸ್ ಡ್ರೈವರ್​ಗೆ ಕಾರು ಗಿಫ್ಟ್ ಕೊಟ್ಟ ನಟ ಕಮಲ್ ಹಾಸನ್

Kamal Haasan
Published on

ಚೆನ್ನೈ: ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಪ್ರಯಾಣ ಟಿಕೆಟ್ ನೀಡಿದ ವಿವಾದದ ಹಿನ್ನೆಲೆಯಲ್ಲಿ ಬಸ್ ಚಾಲಕ ಕೆಲಸ ತೊರೆದ ಕೊಯಮತ್ತೂರು ಮೂಲದ ಮಹಿಳೆಗೆ ನಟ, ರಾಜಕಾರಣಿ ಕಮಲ್ ಹಾಸನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತಾದ ಫೋಟೋ ಸೊಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೊಯಮತ್ತೂರಿನಲ್ಲಿ ಸಾರಿಗೆ ಬಸ್​ ಓಡಿಸಿದ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಶರ್ಮಿಳಾ ಪಾತ್ರರಾಗಿದ್ದಾರೆ. ಗಾಂಧಿಪುರ ಟು ಸೋಮನೂರು ಮಾರ್ಗದಲ್ಲಿ ಖಾಸಗಿ ಬಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆದ ಒಂದು ಘಟನೆಯಿಂದ ಬೇಸರಗೊಂಡಿದ್ದ ಶರ್ಮಿಳಾ ಕೆಲಸಕ್ಕೆ ರಾಜೀನಾಮೆ ನೀಡದ್ದಳು.

ಬಸ್ ಚಾಲಕಿ ಶರ್ಮಿಳಾ ಫ್ಯಾಮಿಲಿಯನ್ನು ನಟ ಕಮಲ್ ಹಾಸನ್ ಮನೆಗೆ ಕರೆಸಿ ಕೆಲ ಕಾಲ ಮಾತಾಡಿದ್ದಾರೆ. ಬಸ್ ಚಾಲಕಿ ಶರ್ಮಿಳಾ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಮಲ್ ಹಾಸನ್ ಪ್ರತಿಕ್ರಿಯಿಸಿ, “ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರ ಕೆಲಸವನ್ನು ಕಳೆದುಕೊಂಡಿರುವುದಕ್ಕೆ ನನಗೆ ತುಂಬಾ ದುಃಖವಾಗಿದೆ. ಕೊಯಮತ್ತೂರಿನಲ್ಲಿ ಪ್ರಥಮ ಖಾಸಗಿ ಬಸ್ ಚಾಲಕಿಯಾಗಿದ್ದಾರೆ. ಯುವಕರಿಗೆ ಸ್ಫೂರ್ತಿ ನೀಡಿದ ಶರ್ಮಿಳಾ ಚಾಲಕಿಯಾಗಿ ಉಳಿಯಬಾರದು. ಆಕೆಗೆ ನಮ್ಮ ಕಮಲ ಸಾಂಸ್ಕೃತಿಕ ಕೇಂದ್ರದಿಂದ ಕಾರು ಕೊಡುತ್ತಿದ್ದೇವೆ. ಕ್ಯಾಬ್ ಸೇವೆಗಳ ಹೊರತಾಗಿ, ಈ ಕಾರನ್ನು ಇತರ ಕೆಲವರಿಗೆ ಉದ್ಯೋಗ ಒದಗಿಸುವ ಉದ್ಯಮಿಯಾಗಿ ಬಳಸಬಹುದು. ಅನೇಕ ಶರ್ಮಿಳಾರನ್ನು ಮಾಡುವುದೇ ನನ್ನ ಉದ್ದೇಶ,’’ ಎಂದರು. ಅಲ್ಲದೇ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮಾಲ್ ಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ.

ಕಳೆದ ವಾರ, ಶರ್ಮಿಳಾ ಅವರು ಕರ್ತವ್ಯದಲ್ಲಿದ್ದಾರು, ಇತ್ತೀಚಿಗೆ ವಿವಿಧ ಕಾರ್ಯಕ್ರಮಗಳಿಗೆ ಕೊಯಮತ್ತೂರ್ ಗೆ ಬಂದಿದ್ದ ಸಂಸದೆ ಕನಿಮೊಳಿ , ಶರ್ಮಿಳಾ ಅವರು ಭೇಟಿಯಾಗಿದ್ರು. ಶರ್ಮಿಳಾ ಓಡಿಸುತ್ತಿದ್ದ ಬಸ್ ಹತ್ತಿ ಯುವತಿಯನ್ನು ಹೊಗಳಿ ಆಕೆಯ ಜೊತೆ ಫೋಟೋ ತೆಗೆಸಿಕೊಂಡರು. ಇದಾದ ಬಳಿಕ ಕನಿಮೋಳಿ ಟಿಕೆಟ್ ಕೇಳುವ ವಿಚಾರವಾಗಿ ಶರ್ಮಿಳಾ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ನಿಟ್ಟಿನಲ್ಲಿ ಬಸ್ ಮಾಲೀಕರು ತಮ್ಮನ್ನು ಟೀಕಿಸಿದ್ದಾರೆ ಎಂದು ಶರ್ಮಿಳಾ ಆರೋಪಿಸಿದ್ದರು. ಈ ಗಲಾಟೆ ಬಳಿಕ ಕೆಲಸದಿಂದ ಶರ್ಮಿಳಾ ಅವರನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಹೀಗಾಗಿ ಇಂದು ಕಮಲ್​ ಹಾಸನ್​ ಅವರು ಸಹಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net