

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಆರಂಭ ಮಾಡಿದ ಶಕ್ತಿ ಯೋಜನೆಯ ಉಚಿತ ಸಾರಿಗೆ ಬಸ್ ಪ್ರಯಾಣ ಮಹಿಳೆಯರಿಗೆ ಸಹಾಯಕಾರಿಯಾಗಿದೆ. ದೇವಸ್ಥಾನ, ಪ್ರವಾಸ ಎಂದು ಹೋಗುತ್ತಿರುವುದರ ಜತೆಗೆ ಅಪ್ಪು ಸಮಾಧಿ ಭೇಟಿಗಾಗಿ ಮಹಿಳೆಯರು ಬರುತ್ತಿದ್ದಾರೆ.
ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದಿದೆ. ಆದರೆ ಫ್ಯಾನ್ಸ್ಗೆ ಇರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಉಚಿತ ಬಸ್ ಹಿನ್ನೆಲೆ ಅಪ್ಪು ಸಮಾಧಿ ನೋಡಲು ಮಹಿಳಾ ಅಭಿಮಾನಿಗಳ ದಂಡು ಪ್ರತಿನಿತ್ಯ ಆಗಮಿಸುತ್ತಿದೆ.
ಬಸ್ ಫ್ರೀ ನಂತ್ರ ಅಪ್ಪು ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವೀಕೆಂಡ್ನಲ್ಲೂ ಜನವೋ ಜನ. ಉತ್ತರ ಕರ್ನಾಟಕದ ಹೆಚ್ಚು ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ.
ಅಪ್ಪು ಸಮಾಧಿ ನೋಡಲು ಮೊಮ್ಮಗಳ ಜತೆ ಅಜ್ಜಿಯೊಬ್ಬರು ಬಂದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ 'ಅಜ್ಜಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಜ್ಜಿ ಆಸೆಯನ್ನು ಈಡೇರಿಸಿದ ಮೊಮ್ಮಗಳು ಮಾತನಾಡಿ, ಮನೆಯಲ್ಲಿ ಅಪ್ಪು ಸಿನಿಮಾ ಬಂದರೆ ಚಾನಲ್ ಚೇಂಜ್ ಮಾಡೋಕೆ ಬಿಡೊಲ್ಲ. ಅದ್ಕೆ ಅಜ್ಜಿಗೋಸ್ಕರ ದೂರದಿಂದ ಬಂದಿದ್ದೇವೆ' ಎಂದಿದ್ದಾರೆ.
'ಬಸ್ ಫ್ರೀ ಇದೆ ಅದ್ಕೆ ಫ್ಯಾಮಿಲಿ ಸಮೇತ ಬಂದಿದ್ದೇವೆ. ಕಾಂಗ್ರೆಸ್ ಯೋಜನೆಯಿಂದ ಬರೋಕೆ ಸುಲಭ ಆಯ್ತು' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇತ್ತ ವ್ಯಾಪಾರವೂ ಡಬಲ್ ಆಗಿದೆ ಎಂದು ಅಂಗಡಿಯವರು ಖುಷಿ ಹಂಚಿಕೊಂಡಿದ್ದಾರೆ.