ಜಾಗತಿಕ ಮಟ್ಟದಲ್ಲಿ ಮೈಲಿಗಲ್ಲು ಸಾಧಿಸಿದ ಪ್ರಭಾಸ್​ 'ಕಲ್ಕಿ'!

Untitled design - 2024-06-30T183504.894
Published on

ನ್ಯೂಯಾರ್ಕ್​: ಜೂನ್ 27ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೈನ್ಸ್​-ಫಿಕ್ಷನ್ ಆಧರಿತ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಇದೀಗ ಸಿನಿಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಲಭಿಸುತ್ತಿದ್ದು, ರಿಲೀಸ್ ಆದ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತು. ನಾಗ್ ಅಶ್ವಿನ್ ನಿರ್ದೇಶನದ ಹಾಗೂ ಟಾಲಿವುಡ್​ನ ರೆಬೆಲ್ ಸ್ಟಾರ್ ಪ್ರಭಾಸ್​ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ’, ಭಾರತದ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುವುದರ ಜತೆಗೆ ವಿದೇಶಗಳಲ್ಲಿಯೂ ಅಬ್ಬರಿಸುತ್ತಿದೆ.

ಬಿಗ್ ಬಜೆಟ್​ನಲ್ಲಿ ತಯಾರಾದ​ ಕಲ್ಕಿ ಸದ್ಯ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಉತ್ತರ ಅಮೇರಿಕಾದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಪ್ರಸ್ತುತ 9 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ, 10 ಮಿಲಿಯನ್ ಡಾಲರ್ ಗಳಿಕೆಗೆ ಬಹಳ ಹತ್ತಿರವಿದೆ. ತೆಲುಗು ಚಿತ್ರವೊಂದಕ್ಕೆ ವಿದೇಶದಲ್ಲಿ ಅಪಾರ ಮನ್ನಣೆ ಸಿಗುತ್ತಿರುವುದು ಟಾಲಿವುಡ್​ಗೆ ಸಂತಸ ತಂದಿದೆ. ಅದರಲ್ಲೂ ಪ್ರಭಾಸ್ ಅಭಿನಯದ ಸಿನಿಮಾಗೆ ಇದೊಂದು ದೊಡ್ಡ ಮೈಲಿಗಲ್ಲು ಎಂದೇ ಹೇಳಬಹುದು.

ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಪಶುಪತಿ ರಾಮಸ್ವಾಮಿ, ಶಾಶ್ವತ್ ಚಟರ್ಜಿ ಶೋಬನಾ, ಮೃಣಾಲ್ ಠಾಕೂರ್, ರಾಜೇಂದ್ರ ಪ್ರಸಾದ್ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net