ವಿಚ್ಛೇದನದ ಬಳಿಕ ನನಗೆ ವಾಸಿಸಲು ಮನೆ ಇರಲಿಲ್ಲ; ಕಷ್ಟದ ದಿನಗಳನ್ನು ನೆನೆದ ಕಲ್ಕಿ ಕೊಚ್ಲಿನ್ | Kalki Koechlin

Untitled design - 2024-11-29T144204.103
Published on

ಮುಂಬೈ: ಬಾಲಿವುಡ್​​ ಸಿನಿಮಾಗಳಲ್ಲಿ ಡೈನಾಮಿಕ್​ ಪಾತ್ರಗಳಿಗೆ ಹೆಸರುವಾಸಿ ನಟಿ ಕಲ್ಕಿ ಕೊಚ್ಲಿನ್(Kalki Koechlin). ನಟಿ ಕಲ್ಕಿ ಬಿಟೌಟ್​​​​ ಸಿನಿಮಾ ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾಗಿ ವಿಚ್ಛೇದನ ಪಡೆದಿರುವುದು ಗೊತ್ತೆ ಇದೆ. ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಮಯದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಇರಲಿಲ್ಲ ಎಂದು ನಟಿ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಕಲ್ಕಿ ಕೊಚ್ಲಿನ್​​ ತನ್ನ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾಗ ವೈಯಕ್ತಿಕ ಜೀವನದಲ್ಲಿ ಹೇಗೆ ಕಷ್ಟ ಅನುಭವಿಸಿದೆ ಎಂಬುದನ್ನು ಹೇಳಿದ್ದಾರೆ. ನಾನು ಮತ್ತು ಅನುರಾಗ್ ವಿಚ್ಛೇದನ ಪಡೆದಾಗ ನನ್ನ ಎರಡು ಸಿನಿಮಾಗಳು ಬಿಡುಗಡೆಯಾದವು. ಜಿಂದಗಿ ನಾ ಮಿಲೇಗಿ ದೋಬಾರಾ ಮತ್ತು ಯೇ ಜವಾನಿ ಹೈ ದೀವಾನಿ ಸೂಪರ್​ ಹಿಟ್​​ ಆದವು. ಅದೇ ಸಮಯದಲ್ಲಿ ನಾವು ವಿಚ್ಛೇದನ ಪಡೆದವು ಎಂದಿದ್ದಾರೆ.

ವಿಚ್ಛೇದನದ ಸಮಯದಲ್ಲಿ ಮುಂಬೈನಲ್ಲಿ ವಾಸಿಸಲು ನನಗೆ ಸ್ಥಳವನ್ನು ಹುಡುಕಲು ಸಾಧ್ಯವಾಗಲಿಲ್ಲ. ಆಗ ನನಗೆ ವಾಸಿಸಲು ಒಂದು ಜಾಗ ಸಿಗಲಿಲ್ಲ. ಒಂಟಿಯಾಗಿದ್ದ ನನಗೆ ಯಾರು ಮನೆ ನೀಡುತ್ತಿರಲಿಲ್ಲ. ಸಿನಿಮಾ ರಿಲೀಸ್​ ಆಗಿ ನಾನು ಫೇಮಸ್ ಆದರೂ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜನರು ಬಾಡಿಗೆಗೆ ಮನೆ ಕೇಳಿದರೆ ಕೊಡುತ್ತಿರಲಿಲ್ಲ ಎಂದು ಹೇಳಿದರು.

2008ರಲ್ಲಿ ಅನುರಾಗ್ ಅವರ ದೇವ್.ಡಿ ಚಿತ್ರದ ಮೂಲಕ ಕಲ್ಕಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಶೀಘ್ರದಲ್ಲೇ ಡೇಟಿಂಗ್​​ ಪ್ರಾರಂಭಿಸಿದ ಇಬ್ಬರು 2011ರಲ್ಲಿ ವಿವಾಹವಾದರು. ಆದ್ರೆ ಎರಡು ವರ್ಷಗಳಲ್ಲೇ ಅಂದರೆ 2013ರಲ್ಲಿ ವಿಚ್ಛೇದನ ಪಡೆದು ಬೇರ್ಪಟ್ಟರು. ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗಿನ ವಿಚ್ಛೇದನದ ಬಳಿಕ ನಟಿ ಕಲ್ಕಿ ಕೊಚ್ಲಿನ್ ಹರ್ಷ್‌ಬರ್ಗ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಸಫೊ ಎಂಬ ಮಗಳಿದ್ದಾಳೆ. ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಕಲ್ಕಿ ಕೊನೆಯದಾಗಿ ಗೋಲ್ಡ್ ಫಿಶ್ ಮತ್ತು ಖೋ ಗಯೇ ಹಮ್ ಕಹಾನ್ ನಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net