ಇಂಡಿಕೇಟರ್ ಸರಿಯಾಗಿ ಹಾಕು ಎಂದಿದ್ದೇ ತಪ್ಪಾಯ್ತು! ಚಾಕು ಇರಿದು ಯುವಕನ ಹತ್ಯೆ

Kalburgi
Published on

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ನಗರದ ಬಾರಾ ಹಿಲ್ಸ್ ಬಳಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದ ನಿವಾಸಿ ಪ್ರಮೋದ್​(24) ಕೊಲೆಯಾದ ಯುವಕ.

ಟ್ರಾನ್ಸ್​ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದ ಪ್ರಮೋದ್, ಕಲಬುರಗಿ ನಗರದ ಪೂಜಾ ಕಾಲೋನಿಯಲ್ಲಿರುವ ಸಂಬಂಧಿಕರ ವಾಸಿಸುತ್ತಿದ್ದ. ನಿನ್ನೆ(ಮೇ 21) ರಾತ್ರಿ ಪ್ರಮೋದ್ ತನ್ನ ಮಾವ ಅವಿನಾಶ್ ಜತೆಗೆ ಮನೆಗೆ ಬರುವಾಗ ಕೊಲೆಯಾಗಿ ಹೋಗಿದ್ದಾನೆ.

ತಡರಾತ್ರಿ ಪ್ರಮೋದ್ ಮಾವನೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಜೀಪ್ ಸವಾರರೊಂದಿಗೆ ಜಗಳ ಏರ್ಪಟ್ಟಿದೆ. ಮಹಿಂದ್ರಾ ಥಾರ್ ಜೀಪ್​ನಲ್ಲಿ ಹೋಗುತ್ತಿದ್ದ ಯುವಕರು ಎರಡು ಕಡೆ ಇಂಡಿಕೇಟರ್ ಹಾಕಿ ಗೊಂದಲ ಮಾಡುತ್ತಿದ್ದ. ಸುಮಾರು ಒಂದೂವರೆ ಕಿ.ಮೀ ವರೆಗೆ ಇದೆ ರೀತಿ ಸತಾಯಿಸುತ್ತಿದ್ದರು.

ಇದರಿಂದ ತೊಂದರೆ ಅನುಭವಿಸುತ್ತಿದ್ದ ಬೈಕ್ ಸವಾರ ಪ್ರಮೋದ್, ಇಂಡಿಕೇಟೆರ್ ಸರಿಯಾಗಿ ಹಾಕುವಂತೆ ಹೇಳಿದ್ದಾನೆ. ಈ ವೇಳೆ ಜೀಪ್​ನಿಂದ ಇಳಿದು ಬಂದು ಚಾಕು ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಎಮ್​ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net