More

    ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆ; ಮರ ಬಿದ್ದು ಬೈಕ್ ಸವಾರ ಮೃತ್ಯು

    ಚಿಕ್ಕಮಗಳೂರು: ರಾಜ್ಯದ ಹಲವೆಡೆ ಇಂದು ಮಧ್ಯಾಹ್ನದ ಬಳಿಕ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗಿದ್ದು, ಬೈಕ್ ಸವಾರರೊಬ್ಬರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೇಣುಗೋಪಾಲ್(58) ಮೃತ ವ್ಯಕ್ತಿ.

    ಮೂಡಿಗೆರೆಯಿಂದ ಚಿಕ್ಕಳ್ಳಕ್ಕೆ ವೇಣುಗೋಪಾಲ್ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಹಳ್ಳದ ಗಂಡಿ ಎಂಬಲ್ಲಿ ಬೈಕ್​ನ ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಇದನ್ನೂ ಓದಿ: ಎಷ್ಟು ಕೋರಿಕೊಂಡರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ; ವೈದ್ಯರು-ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ

    ದೇವನಹಳ್ಳಿ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ

    ಬೆಂಗಳೂರು: ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸುತ್ತಮುತ್ತ ಇಂದು ಮದ್ಯಾಹ್ನದಿಂದ ಸುರಿದ ಭಾರಿ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ಆಲಿಕಲ್ಲು ಮಳೆಯಾದ ಕಾರಣ ಜನ‌ ಆತಂತಕಕ್ಕೆ ಒಳಗಾದ ಘಟನೆಯೂ ನಡೆದಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ನಾಲ್ಕು ತಾಲೂಕುಗಳಲ್ಲೂ ಭಾರಿ ಮಳೆಯಾಗಿದೆ. ಇದರಿಂದ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಬೆಂಗಳೂರು-ಹೈದರಾಬಾದ್ ರಸ್ತೆಯ ದೇವನಹಳ್ಳಿ ‌ಇಳಿಜಾರಿನ ಬೈಪಾಸ್​ನಲ್ಲಿ ಅಸಮರ್ಪಕ ರಾಜಕಾಲುವೆ ನಿರ್ಮಾಣದಿಂದ ‌ಮಳೆ ವೇಳೆ ನೀರು ಸರಾಗವಾಗಿ ಹರಿಯದೆ ವಾಹನ ಸವಾರರು ಪರದಾಡುವಂತಾಯಿತು.

    ಇದನ್ನೂ ಓದಿ: ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!

    ಗಣಿನಾಡಿನಲ್ಲೂ ಗಾಳಿ ಮಳೆ

    ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ವರುಣರಾಯ ಆರ್ಭಟಿಸಿದ್ದಾನೆ. ಮಳೆ ಜತೆಗೆ ಬಿರುಗಾಳಿ ಬಂದ ಕಾರಣದಿಂದಾಗಿ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಕೆಲವೆಡೆ ಮನೆಯ ಮೇಲ್ಛಾವಣಿಯೂ ಗಾಳಿಯ ರಭಸಕ್ಕೆ ಹಾರಿ ಹೋದ ಘಟನೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts