More

    ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!

    ನವದೆಹಲಿ: ಸುಮಾರು 4500 ವರ್ಷಗಳ ಹಿಂದೆ ಮೆಸೊಪಟ್ಯಾಮಿಯಾದಲ್ಲಿ ಜನರು ಮೊದಲ ಬಾರಿಗೆ ತುಟಿಗೆ ಚುಂಬಿಸುವುದನ್ನು(Lip Kiss) ಆರಂಭಿಸಿದರು ಎಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಸದ್ಯ ಈ ವರದಿಯ ಪ್ರಕಾರ ತುಟಿಗೆ ನೀಡುವ ಚುಂಬನಕ್ಕೆ 1000 ವರ್ಷಗಳ ಇತಿಹಾಸ ಮಾತ್ರ ಇರುವುದು ಎಂಬ ಮಾತನ್ನು ಸಂಶೋಧಕರು ಅಲ್ಲಗಳೆದಿದ್ದಾರೆ.

    ಲಭ್ಯವಾಗಿರುವ ಪುರಾವೆಗಳ ಪ್ರಕಾರ ಸುಮಾರು 3500 ವರ್ಷಗಳ ಹಿಂದೆ ದಕ್ಷಿಣ ಏಷ್ಯಾದ ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಿ ತುಟಿಗೆ ಚುಂಬಿಸುವುದು ಹುಟ್ಟಿಕೊಂಡಿವೆ. ಅಲ್ಲಿಂದ ಲಿಪ್ ಕಿಸ್ ಇತರ ಪ್ರದೇಶಗಳಿಗೆ ಹರಡಿರಬಹುದು ಎಂದು ಈ ಹಿಂದಿನ ಸಂಶೋಧನೆಗಳು ಊಹಿಸಿವೆ.

    ಇದನ್ನೂ ಓದಿ: VIDEO | ಜೀವಂತ ನವಿಲಿಗೆ ಚಿತ್ರಹಿಂಸೆ; ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

    ಸದ್ಯ ಸೈನ್ಸ್ ಜರ್ನಲ್‌ ಒಂದರಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 4,500 ವರ್ಷಗಳ ಹಿಂದೆಯೇ ಮಾನವರಿಗೆ ತುಟಿಗೆ ಚುಂಬಿಸುವುದು ಅಭ್ಯಾಸವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.

    ಇಂದಿನ ಇರಾಕ್ ಮತ್ತು ಸಿರಿಯಾದಲ್ಲಿ ಹರಿಯುವ ಯೂಫ್ರೇಟ್ಸ್ ಮತ್ತು ಟೈಗ್ರಿಸ್ ನದಿಗಳ ನಡುವೆ ಅಸ್ತಿತ್ವದಲ್ಲಿದ್ದ ಮೆಸೊಪಟ್ಯಾಮಿಯಾ ಪ್ರದೇಶದಲ್ಲಿದ್ದ ಮಾನವ ಜನಾಂಗ ಮಣ್ಣಿನ ಪಾತ್ರೆಗಳನ್ನು ಸಿದ್ಧಪಡಿಸುತ್ತಿತ್ತು. ಅದರ ಮೇಲೆ ಕ್ಯೂನಿಫಾರ್ಮ್ ಲಿಪಿಯಲ್ಲಿ ಚಿತ್ರ ಬರೆಯುತ್ತಿದ್ದರು. ಇಂತಹ ಸಾವಿರಾರು ಜೇಡಿಮಣ್ಣಿನ ಪಾತ್ರೆಗಳು ಇಂದಿಗೂ ಉಳಿದುಕೊಂಡಿವೆ. ಅವುಗಳ ಮೇಲೆ ಗಂಡು-ಹೆಣ್ಣು ಚುಂಬಿಸುವಂತಹ ಚಿತ್ರಗಳು ರಚಿತವಾಗಿವೆ ಎಂದು ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾದ ಅದೊಂದು ದೃಶ್ಯದ ಬಗ್ಗೆ ಅಜ್ಜಿಯ ಪ್ರತಿಕ್ರಿಯೆಗೆ ಹೆದರುತ್ತಿದ್ದೆ: ಅದಾ ಶರ್ಮಾ

    ಮಧ್ಯಪ್ರಾಚ್ಯದ ಕಾಲದಲ್ಲಿ ಸ್ನೇಹ ಮತ್ತು ಕುಟುಂಬ ಸದಸ್ಯರ ನಡುವೆ ಸಂಬಂಧಗಳ ಭಾಗವಾಗಿ ಚುಂಬನ ವ್ಯಕ್ತವಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ ಚುಂಬನವನ್ನು ಪ್ರಣಯದ ಅನ್ಯೋನ್ಯತೆಯ ಭಾಗವೆಂದು ಪರಿಗಣಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳಿವೆ ಎಂದು ಸಂಶೋಧಕ ಡಾ. ಟ್ರೋಲ್ಸ್ ಪ್ಯಾಂಕ್ ವರದಿಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts