ಸರ್ವಧರ್ಮೀಯರ ಸೌಹಾರ್ದ

8kls1 ganapa
ಕಳಸ ಅರಮನೆ ಮಕ್ಕಿಯಲ್ಲಿ ಪ್ರತಿಷ್ಠಾಪಿಸಿರುವ ಸೌಹಾರ್ದ ಗಣಪತಿ.
Published on

ಕಳಸ: ತಾಲೂಕು ಕೇಂದ್ರ ಆದ ನಂತರದಲ್ಲಿ ಸರ್ವಧರ್ಮೀಯರು ಸೌಹಾರ್ದ ಗಣೇಶೋತ್ಸವವನ್ನು ನಡೆಸುತ್ತಿರುವುದು ಊರಿನ ಉತ್ತಮ ಬೆಳವಣಿಗೆ ಸೂಚಿಸುತ್ತದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು. ಕಳಸದ ಅರಮನೆಮಕ್ಕಿಯಲ್ಲಿ ಪ್ರಥಮ ವರ್ಷದ ಸೌಹಾರ್ದ ಗಣೇಶೋತ್ಸವದ ಪ್ರತಿಷ್ಠಾಪನೆಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವನ್ನು ನೆಪವನ್ನಾಗಿಟ್ಟುಕೊಂಡು ಊರಿಗೆ ಶಾಶ್ವತ ಬೃಹತ್ ವೇದಿಕೆ ಹಾಗೂ ಅದಕ್ಕೆ ಬೇಕಾದ ಸವಲತ್ತುಗಳನ್ನು ಮಾಡಿಕೊಂಡು ಹಬ್ಬದ ಆಚರಣೆ ಜತೆ ಊರಿನ ಅಭಿವೃದ್ಧಿಗೆ ಗಮನ ಹರಿಸಿದ ಸಮಿತಿಯ ಕಾರ್ಯವೈಖರಿ ಮಾದರಿ. ಇದು ಸಂಘಟಿತ ಕಾರ್ಯಕ್ರಮವಾಗಿದೆ. ಯಾವ ಉದ್ದೇಶಕ್ಕಾಗಿ ಗಣೇಶೋತ್ಸವ ರಾಷ್ಟ್ರೀಯ ಹಬ್ಬವಾಯಿತೋ ಅದೇ ಉದ್ದೇಶದಿಂದ ಕಳಸದಲ್ಲಿ ಸಂಘಟಿತ ಸಮಿತಿ ರಚನೆಯಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರು ರಿಯಾ ಮ್ಯೂಸಿಕಲ್‌ನಿಂದ ಸಂಗೀತ ರಸಸಂಜೆ ನಡೆಯಿತು. 9 ದಿನ ಇಲ್ಲಿ ಗಣೇಶೋತ್ಸವ ನಡೆಯಲಿದೆ. ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ, ಸಮಿತಿ ಅಧ್ಯಕ್ಷ ಬಿ.ವಿ.ರವಿ ರೈ, ಗೌರವ ಕಾರ್ಯದರ್ಶಿ ಬ್ರಹ್ಮದೇವ, ಖಜಾಂಚಿ ಪದ್ಮಕುಮಾರ್, ಕಾಫಿ ಬೆಳೆಗಾರ ಕೆ.ಸಿ.ಧರಣೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net