

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಪ್ರವಾಸ ಎಂದರೆ ಒಂದು ಸಂತೋಷ, ಖುಷಿ ಮಕ್ಕಳಿಗೆ ಇರುತ್ತದೆ. ಪ್ರವಾಸದಲ್ಲಿ ಪ್ರಯಾಣ ಮಾಡಲು ಸರ್ಕಾರಿ ಬಸ್ಗಳನ್ನು ಬಕ್ ಮಾಡಲಾಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ. ಆದರೆ ಇಲ್ಲೊಬ್ಬರು ಹಳ್ಳಿ ಮೇಷ್ಟ್ರು ಮಕ್ಕಳಿಗೆ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿರುವ ಕನ್ನಡ ಮಾಧ್ಯಮ ಶಾಲೆ. ಈ ಗ್ರಾಮ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕರ್ನಾಟಕದ ಗಡಿ ಗ್ರಾಮದ ಶಾಲಾ ಮಕ್ಕಳು ವಿಮಾನ ಪ್ರಯಾಣ ಮೂಲಕ ಪ್ರವಾಸ ಹೋಗಿದ್ದಾರೆ.
ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಂದ ಸ್ವಲ್ಪ ಹಣ ಸಂಗ್ರಹಿಸಿ, ತಮ್ಮ ಕೈಯಿಂದ ಹೆಚ್ಚಿನ ಹಣವನ್ನು ಹಾಕಿ ತಮ್ಮ ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ ಮಾಡಿಸಿದ್ದಾರೆ. ಬಡ ಮಕ್ಕಳ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಕಟ್ಟಿಮನಿ ಅವರು ಸರ್ಕಾರಿ ಶಾಲೆಯ ಮಕ್ಕಳನ್ನ ಸಂಸತ ಭವನ, ರಾಷ್ಟ್ರಪತಿ ಭವನ ಹಾಗೂ ಕೆಂಪುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ತೋರಿಸಿಕೊಂಡು ಬಂದಿದ್ದಾರೆ.
ಒಂದೂವರೆ ವರ್ಷದ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಕಟ್ಟಿಮನಿ ಅವರು, ಕಳೆದ ವರ್ಷ ಶಾಲೆಯ ಮಕ್ಕಳನ್ನು ರೈಲು ಮೂಲಕ ಮುಂಬೈ ಹಾಗೂ ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರು ಪ್ರವಾಸ ಮಾಡಿಸಿದ್ದಾರೆ. ಈ ಬಾರಿಯೂ ರೈಲು ಮೂಲಕ ಮುಂಬೈ, ನಂತರ ಮುಂಬೈನಿಂದ ದೆಹಲಿಗೆ ಮಕ್ಕಳನ್ನು ವಿಮಾನ ಪ್ರವಾಸ ಮಾಡಿಸಿದ್ದಾರೆ.
ನಮ್ಮ ಮಕ್ಕಳು ಈ ಹಳ್ಳಿಯಲ್ಲಿ ಆಕಾಶದಲ್ಲಿ ಹಾರುಡುವ ವಿಮಾನವನ್ನು ನೋಡಿ ಖುಷಿ ಪಡ್ತಿದ್ದರು ಈಗ ಮಹಾಂತೇಶ್ವರ ಕಟ್ಟಿಮನಿ ಸರ್ ಅವರಿಂದ ವಿಮಾನವನ್ನು ಏರಿ ದೆಹಲಿ ನೋಡಿಬಂದಿದ್ದಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.