ಕೃಷಿಕರು ಖುಷಿಯಿಂದಿದ್ದರೆ ದೇಶ ಸುಭಿಕ್ಷ

Kailancha-Ph-00001-Hunasanahalli Krushi Ratha Chalane-MLA-Anithakumarswamy-22-7-2021
Published on

ಕೈಲಾಂಚ : ರೈತರು ಖುಷಿಯಿಂದ ಇದ್ದಾಗ ಮಾತ್ರ ನಾಡು, ದೇಶ ಸುಭಿಕ್ಷ್ಷವಾಗಿರಲು ಸಾಧ್ಯ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನದ ಪ್ರಚಾರ ರಥಕ್ಕೆ ಗುರುವಾರ ಚಾಲನೆ ಮಾತನಾಡಿದರು.

ರೈತರು ಕೃಷಿಯಿಂದ ಹಿಮ್ಮುಖರಾಗದಂತೆ ಹಾಗೂ ಹೆಚ್ಚಿನ ಲಾಭಗಳಿಸುವಂತೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆದಾಡುವಂತೆ ಮಾಡದೆ, ಅವರ ಮನೆ ಬಾಗಿಲಿಗೇ ಸರ್ಕಾರದ ಯೋಜನೆಗಳ ಮಾಹಿತಿ, ಸವಲತ್ತುಗಳನ್ನು ತಲುಪಿಸಬೇಕು. ರೈತರು ಕೂಡ ಆಧುನಿಕ ಬೇಸಾಯ ಪದ್ಧತಿ ಅನುಸರಿಸಿ ಕೃಷಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.

ರಾಮನಗರ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಾ. ವನಿತಾ ಮಾತನಾಡಿ, ರೈತರಿಗೆ ಇಲಾಖೆಗಳಲ್ಲಿ ಸಿಗುವ ಕೃಷಿ ಯಂತ್ರ, ಬಿತ್ತನೆ ಬೀಜ ಮುಂತಾದ ಸವಲತ್ತುಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು ಕೃಷಿ ರಥದ ಉದ್ದೇಶವಾಗಿದೆ ಎಂದರು.ಇದೇ ಸಂಧರ್ಭದಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ಬಿತ್ತನೆ ರಾಗಿ ವಿತರಿಸಲಾಯಿತು. ಶಾಸಕರಿಂದ ಪ್ರಚಾರ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು.

ಸಮಸ್ಯೆ ಹೆಳಿಕೊಂಡ ಗ್ರಾಮಸ್ಥರು: ತುಂಬೇನಹಳ್ಳಿ ಗ್ರಾಮಕ್ಕೆ ಬಸ್ ಬರುತ್ತಿಲ್ಲ. ಜನರಿಗೆ ತೊಂದರೆಯಾಗಿದೆ. ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಿದ್ದು, ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಸೂಚಿಸುವಂತೆ ಗ್ರಾಮಸ್ಥರು ಶಾಸಕಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಅರಣ್ಯ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net