ಬರದ ಛಾಯೆ ತಪ್ಪಿಸಿ

KDR parisara
ಕಡೂರು ತಾಲೂಕು ಜಿಗಣೇಹಳ್ಳಿ ಗ್ರಾಮದ ಕೆರೆ ಏರಿ ಬಳಿ ಸಸಿ ನೆಡಲಾಯಿತು. ಜಿಗಣೇಹಳ್ಳಿ ನೀಲಕಂಠಪ್ಪ, ರೆಹಮಾನ್, ವೀರಭದ್ರಪ್ಪ, ಹನುಮಂತಪ್ಪ, ಮರಿಯಪ್ಪ, ಚೈತ್ರಾ ಇತರರಿದ್ದರು.
Published on

ಕಡೂರು: ಬರದ ಛಾಯೆಯನ್ನು ತಪ್ಪಿಸಲು ಪರಿಸರ ಸಂರಕ್ಷಣೆ ಬಹುಮುಖ್ಯ ಎಂದು ಜಿಗಣೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು. ಜಿಗಣೇಹಳ್ಳಿ ಕೆರೆ ಏರಿಯ ಬಳಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ತಾಲೂಕು ಪದೇಪದೆ ಬರಗಾಲಕ್ಕೆ ತುತ್ತಾಗುತ್ತಿರುವುದು ಬಹುಶಃ ಪರಿಸರ ಸಂರಕ್ಷಣೆಯಲ್ಲಿ ಹಿಂದುಳಿದಿರುವುದೂ ಒಂದು ಕಾರಣ. ಗಿಡ-ಮರಗಳನ್ನು ಸಂರಕ್ಷಿಸುವುದರ ಮೂಲಕ ಪರಿಸರದ ಅಸಮತೋಲನ ಸರಿಪಡಿಸುವ ಕಾರ್ಯದಲ್ಲಿ ಎಲ್ಲರೂ ಸ್ವಪ್ರೇರಣೆಯಿಂದ ತೊಡಗಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ರೆಹಮಾನ್, ಡಿಇಒ ವೀರಭದ್ರಪ್ಪ, ಹನುಮಂತಪ್ಪ, ಚೈತ್ರಾ, ಮರಿಯಪ್ಪ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net