

ವಿಜಯಪುರ: ಕೊಲ್ಹಾರ ತಾಲೂಕಿನ ರೋಣಿಗಾಳ ಕ್ರಾಸ್ನಲ್ಲಿ ಲಾರಿ ಮತ್ತು ಟವೇರಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಕಬಡ್ಡಿ ಕ್ರೀಡಾಪಟುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಕ್ರೀಡಾಪಟುಗಳ ಸ್ಥಿತಿ ಗಂಭೀರವಾಗಿದೆ.
ಸೊಹೇಲ್(22) ಮತ್ತು ಮಹಾದೇವ(20) ಮೃತರು. ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯತ್ತ ಹತ್ತು ಜನರ ಕಬಡ್ಡಿ ತಂಡ ಟವೇರಾದಲ್ಲಿ ಪ್ರಯಾಣಿಸುತ್ತಿತ್ತು.