

ನವದೆಹಲಿ: ಯುವ ನಾಯಕತ್ವವನ್ನು ಮುನ್ನೆಲೆಗೆ ತರಲು ನಿರಾಸಕ್ತಿ ವಹಿಸಿದ್ದಕ್ಕೆ ಭಾರೀ ಬೆಲೆ ತೆರುತ್ತಿರುವ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಸಿಎಂ ಕಮಲ್ನಾಥ್ ಮತ್ತು ಮಾಜಿ ಸಿಎಂ ದಿಗ್ವಿಜಯ ಸಿಂಗ್ರಂಥ ಪಟ್ಟಭದ್ರರ ಹಿತಾಸಕ್ತಿ ಬೆಂಬಲಿಸಿದ ಪರಿಣಾಮ ಮೂಲೆಗುಂಪಾಗಿದ್ದ ಮಾಸ್ಲೀಡರ್ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದು ಬಿಜೆಪಿಯತ್ತ ಹೆಜ್ಜೆ ಹಾಕಿದ್ದಾರೆ. ಅವರನ್ನು ಅನುಸರಿಸಿ ಕಾಂಗ್ರೆಸ್ನ 22 ಶಾಸಕರು ಸಹ ರಾಜೀನಾಮೆ ಸಲ್ಲಿಸುವುದರೊಂದಿಗೆ ಕಮಲ್ನಾಥ್ ಸರ್ಕಾರ ಬಹುಮತ ಕಳೆದುಕೊಂಡಿದೆ.
ಹಸ್ತವ್ಯಸ್ತ: ರಾಜ್ಯ ನಾಯಕರ ಕಡೆಗಣನೆ ಹಾಗೂ ನಿಷ್ಕ್ರಿಯ ಹೈಕಮಾಂಡ್ನಿಂದಾಗಿ ಬೇಸತ್ತಿದ್ದ ಸಿಂಧಿಯಾ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು.
ಇದರ ಬೆನ್ನಲ್ಲೇ ಸೋಮವಾರ ಎಚ್ಚೆತ್ತುಕೊಂಡ ದಿಲ್ಲಿ ಮುಖಂಡರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಜತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಡಲು ಅದಾಗಲೇ ತೀರ್ವನಿಸಿದ್ದ ಸಿಂಧಿಯಾ ತಮ್ಮ ನಿಲುವು ಬದಲಿಸಲಿಲ್ಲ. ಇನ್ನೊಂದೆಡೆ ಕಮಲ್ ನಾಥ್ರನ್ನು ದೆಹಲಿಗೆ ಕರೆಸಿಕೊಂಡ ಸೋನಿಯಾ ಸರ್ಕಾರ ಉಳಿಸುವ ಬಗ್ಗೆ ರ್ಚಚಿಸಿದ್ದರು. ಆದರೆ, ಪಕ್ಷದ 18 ಶಾಸಕರು ಬಂಡೆದ್ದು ಬೆಂಗಳೂರಿಗೆ ತೆರಳಿದ್ದಾರೆ ಎಂಬ ಸುದ್ದಿ ಖಚಿತಪಡುತ್ತಿದ್ದಂತೆಯೇ ಕಮಲ್ ನಾಥ್ ದಿಲ್ಲಿ ಪ್ರವಾಸ ಮೊಟಕುಗೊಳಿಸಿ ಭೋಪಾಲ್ಗೆ ಮರಳಿದ್ದರು.
ಆಂತರಿಕ ತಿಕ್ಕಾಟದ ಪರಿಣಾಮ
ನಾಲ್ವರು ಪಕ್ಷೇತರರು ಮತ್ತು ಎಸ್ಪಿ-ಬಿಎಸ್ಪಿಯ ಶಾಸಕರ ಬೆಂಬಲ ಗಳಿಸಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ಗೆ ಐದು ವರ್ಷಗಳ ಕಾಲ ಆಡಳಿತ ನಡೆಸುವ ಅವಕಾಶವಿತ್ತು. ಆದರೆ, ರಾಜ್ಯ ನಾಯಕರ ನಡುವಿನ ಸಮನ್ವಯದ ಕೊರತೆ ಹಾಗೂ ಸಿಂಧಿಯಾ ವರ್ಚಸ್ಸಿಗೆ ಮಾನ್ಯತೆ ನೀಡುವಲ್ಲಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಎಡವಿದ್ದೇ ಪಕ್ಷ ಮತ್ತು ಸರ್ಕಾರದ ಈ ದುಸ್ಥಿತಿಗೆ ಕಾರಣ.
ಸಿಂಧಿಯಾರ ತಂದೆ ಮಾಧವ ರಾವ್ ಸಿಂಧಿಯಾ ಬಿಜೆಪಿಯವರನ್ನು ಹಿಂದೊಮ್ಮೆ ದೇಶ ದ್ರೋಹಿಗಳು ಎಂದು ಟೀಕಿಸಿದ್ದರು. ಈಗ ಅದೇ ಪಕ್ಷ ಸೇರುತ್ತಿರುವ ತಮ್ಮ ಪುತ್ರನ ಬಗ್ಗೆ ಅವರಿಗೆ ಏನನಿಸುತ್ತಿದೆಯೋ? | ಜೈರಾಮ್ ರಮೇಶ್ ಕಾಂಗ್ರೆಸ್ ಮುಖಂಡ
ಲಾಭ, ನಷ್ಟದ ಲೆಕ್ಕಾಚಾರ
ಸೋಮವಾರವೇ ರಾಜೀನಾಮೆ
ಕಾಂಗ್ರೆಸ್ ನಾಯಕರ ಮನವಿಯಂತೆ ಸಿಂಧಿಯಾ ಮಂಗಳವಾರದ ತನಕ ತಮ್ಮ ರಾಜೀನಾಮೆ ಬಹಿರಂಗಗೊಳಿಸಿರಲಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಕೂಡಲೇ ಟ್ವಿಟ್ಟರ್ನಲ್ಲಿ ರಾಜೀನಾಮೆ ಪತ್ರ ಪ್ರಕಟಿಸಿದರು. ರಾಜೀನಾಮೆ ಬಗ್ಗೆ ಕಳೆದೊಂದು ವರ್ಷದಿಂದ ಯೋಚಿಸುತ್ತಿದ್ದೆ. ಇದು ನಿಮಗೂ ಗೊತ್ತಿದೆ. ಮೊದಲಿನಿಂದಲೂ ಜನ ಸೇವೆ ಮಾಡುವುದು ನನ್ನ ಆದ್ಯತೆಯಾಗಿತ್ತು. ಆದರೆ ಈ ಪಕ್ಷದಲ್ಲಿದ್ದುಕೊಂಡು ನನ್ನ ಗುರಿ ಸಾಧನೆ ಸಾಧ್ಯವಿಲ್ಲ. ಹೀಗಾಗಿ, ನನ್ನ ಹೊಸ ಹಾದಿ ಕಂಡುಕೊಂಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಸಿಂಧಿಯಾ ಕೈಬಿಟ್ಟಿದ್ದೇಕೆ?