More

    ಮಧ್ಯಪ್ರದೇಶದಲ್ಲಿ ಮತ್ತಿಬ್ಬರು ಶಾಸಕರಿಂದ ರಾಜೀನಾಮೆ: 22ಕ್ಕೆ ಏರಿತು ಕಾಂಗ್ರೆಸ್​ಗೆ ಕೈ ಕೊಟ್ಟವರ ಸಂಖ್ಯೆ

    ಭೋಪಾಲ್​: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಬಿಜೆಪಿ ಕಂಟಕವಾಗಿ ಕಾಡಲಾರಂಭಿಸಿದೆ. ಜ್ಯೋತಿರಾದಿತ್ಯ ಸಿಂಧ್ಯಾ ರಾಜೀನಾಮೆ ಕಾಂಗ್ರೆಸ್​ ಪಕ್ಷಕ್ಕೆ ನೀಡದ ಬೆನ್ನಲ್ಲೇ 19 ಶಾಸಕರು ರಾಜೀನಾಮೆಯನ್ನು ಸಲ್ಲಿಸಿದ್ದರು. ಇದೀಗ ಶಾಸಕ ಅದಾಲ್​ ಸಿಂಗ್​ ಕನ್ಸಾನ್​ ಮತ್ತು ಮನೋಜ್​ ಚೌಧರಿ ರಾಜೀನಾಮೆ ಸಲ್ಲಿಸಿದ್ದು ಪಕ್ಷ ತೊರೆದ ಶಾಸಕರ ಸಂಖ್ಯೆ 22ಕ್ಕೆ ಏರಿದೆ.

    ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಸೋಮವಾರ ರಾತ್ರಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ವಿಚಾರವನ್ನು ಟ್ವೀಟ್​ ಮೂಲಕ ಬಹಿರಂಗಪಡಿಸಿದ್ದರು. ಅದರ ಬೆನ್ನಲ್ಲೇ 19 ಶಾಸಕರು ಬೆಂಗಳೂರಿನಲ್ಲಿ ಇದ್ದುಕೊಂಡೇ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯದ ವಿಧಾನಸಭೆಯ ಸ್ಪೀಕರ್​ಗೆ ರವಾನಿಸಿದ್ದರು. ಇದೀಗ ಶಾಸಕ ಮನೋಜ್​ ಚೌಧರಿ ಮತ್ತು ಅದಾಲ್​ ಸಿಂಗ್​ ಕನ್ಸಾನ್​ ಕೂಡ ರಾಜೀನಾಮೆ ಸಲ್ಲಿಸಿರುವುದಾಗಿ ಮಾಹಿತಿ ಲಭಿಸಿದೆ.

    ಶಾಸಕರ ಈ ನಡೆಯೊಂದಿಗೆ ಕಮಲನಾಥ ಸರ್ಕಾರದ ಬಹುಮತ ಕುಸಿದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ 228 ಶಾಸಕರಿದ್ದು, ಈ ಪೈಕಿ ಬಿಜೆಪಿಗೆ 109, ಬಿಎಸ್​ಪಿ 2, ಸಮಾಜವಾದಿ ಪಕ್ಷ 1, ಪಕ್ಷೇತರ 4 ಸದಸ್ಯರಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್​ಗೆ 114 ಸದಸ್ಯಬಲ ಇತ್ತು. ಈಗ 22 ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಸದಸ್ಯ ಬಲ 93ಕ್ಕೆ ಕುಸಿದಿದೆ. (ಏಜೆನ್ಸೀಸ್​)

    ಸಿಂಧ್ಯಾ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಅಚ್ಚರಿಯ ಕ್ರಮ; ಟ್ವಿಟರ್​ ಮೂಲಕ ಘೋಷಣೆ

    ಬೆಂಗಳೂರಿನಲ್ಲಿ ಇದ್ದುಕೊಂಡೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ 19 ಕಾಂಗ್ರೆಸ್ ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts