

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ನೆಟ್ಟಿಗರ ಚರ್ಚೆಗೆ ಗ್ರಾಸವಾಗುತ್ತದೆ. ಯಾವುದಾದರೂ ವಿಚಿತ್ರ, ವಿಲಕ್ಷಣ ಅಥವಾ ಅಪರೂಪದ ದೃಶ್ಯಗಳು ಒಂದು ಬಾರಿ ನೋಡುಗರ ಗಮನ ಸೆಳೆದರೆ ಸಾಕು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಅಂತಹದ್ದೇ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುತ್ತುವರೆದಿದ್ದು, ಜನಪ್ರಿಯ ಸಂಗೀತ ಜೋಡಿಯಾದ ನೂರಾನ್ ಸಿಸ್ಟರ್ಸ್ ಹಣದ ವಿಡಿಯೋ ಸದ್ಯ ನೆಟ್ಟಿಗರ ಗಮನಸೆಳೆದಿದೆ.
ಎಂದಿನಂತೆ ಹಲವಾರು ಕಾರ್ಯಕ್ರಮಗಳ ವೇದಿಕೆ ಮೇಲೆ ಜತೆಗೆ ಹಾಡುವ ನೂರಾನ್ ಸಿಸ್ಟರ್ಸ್ ಸಮಾರಂಭವೊಂದರಲ್ಲಿ ವಿಶೇಷ ಹಾಡಿನ ಕಾರ್ಯಕ್ರಮ ನೀಡಿದ್ದರು. ಈ ವೇಳೆ ಸಂಗೀತದಲ್ಲಿ ತೊಡಗಿದ್ದ ಜ್ಯೋತಿ ನೂರಾನ್ ಮೇಲೆ ಹಣದ ಮಳೆ ಸುರಿಸಲು ವೇದಿಕೆಯ ಮೇಲೆ ಬಂದ ಬಾಲಕನೊಬ್ಬನಿಗೆ ಜ್ಯೋತಿ ಮಾಡಿದ್ದೇನು ಎಂಬುದೇ ರೋಚಕವಾಗಿದೆ. ಅಸಲಿಗೆ ಇದು ಹಳೆಯ ವೀಡಿಯೊ ಆದರೂ ಸಹ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವೇದಿಕೆಗೆ ಬಂದ ಬಾಲಕನೊಬ್ಬ ತನ್ನ ಮೇಲೆ ಹಣದ ಸುರಿಮಳೆಗೈಯಲು ಬಂದದ್ದನ್ನು ಗಮನಿಸಿದ ನೂರಾನ್, ತಕ್ಷಣವೇ ಅದನ್ನು ತಡೆದು ಆತನ ಬಳಿಯಿದ್ದ ಹಣವನ್ನು ಹಿಂತಿರುಗಿಸಿದ್ದಲ್ಲದೇ, ತನಗೆ ವೀಕ್ಷಕರು ನೀಡಿದ್ದ ಹಣವನ್ನೆಲ್ಲಾ ತನ್ನ ದುಪ್ಪಟ್ಟ ತೆರೆದು ಅದರೊಳಗೆ ತುಂಬಿ ಬಾಲಕನಿಗೆ ಕೊಟ್ಟಿದ್ದಾರೆ. ಇದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ತನ್ನ ಸಂಪಾದನೆಯನ್ನು ಪುಟ್ಟ ಪೋರನಿಗೆ ಕೊಟ್ಟ ಜ್ಯೋತಿ ಅವರದ್ದು ಚಿನ್ನದಂತ ಹೃದಯ ಎಂದು ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).