VIDEO| ಸಾರ್ವಜನಿಕರ ಎದುರಲ್ಲೇ ನ್ಯಾಯಾಧೀಶರನ್ನು ನಿಂದಿಸಿ ಹಲ್ಲೆ ಮಾಡಿದ ಪುಂಡರು

Judge
Published on

ಲಖನೌ: ಆಘಾತಕಾರಿ ಪ್ರಕರಣವೊಂದರಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮೇಲೆ ಜನನಿಬಿಡ ಪ್ರದೇಶದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಲಖನೌನ ಜೋಪ್ಲಿಂಗ್ ರಸ್ತೆಯಲ್ಲಿ ನಡೆದಿದೆ.

ಘಟನೆ ಮಂಗಳವಾರ ಸಂಜೆ ನಡೆದಿದ್ದು, ಅಶುತೋಷ್​ ಕುಮಾರ್​ ಹಲ್ಲೆಗೊಳಗಾದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ?

ಈ ಕುರಿತು ಪ್ರತಿಕ್ರಿಯಿಸಿರುವ ಲಖನೌ ಡಿಸಿಪಿ (ಕೇಂದ್ರ) ಅಪರ್ಣ ರಜತ್ ಕೌಶಿಕ್, ಘಟನೆ ಸಂಬಂಧ ಪೊಲೀಸ್​ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದು, ನ್ಯಾಯಾಧೀಶರು ಸ್ವತಃ ತಮ್ಮ ಕಾರನ್ನು ತಾವೇ ಚಲಾಯಿಸುತ್ತಿದ್ದರು ಮತ್ತು ಅದರಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿದ್ದವು ಎಂದು ತಮ್ಮ ದೂರಿನಲ್ಲಿ ಉ್ಲಲೇಖಿಸಿದ್ದಾರೆ.

ಘಟನೆ ಮಂಗಳವಾರ ಸಂಜೆ 7:40ರ ಸುಮಾರಿಗೆ ನಡೆದಿದ್ದು, ಆರೋಪಿಗಳು 20 ವರ್ಷ ಆಸುಪಾಸಿನವನು ಎಂದು ತಿಳಿದು ಬಂದಿದೆ. ಘಟನೆ ಬಳಿಕ ಆರೋಪಿ ತಲೆಮಾರಿಸಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡವನ್ಉ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಲಖನೌ ಡಿಸಿಪಿ (ಕೇಂದ್ರ) ಅಪರ್ಣ ರಜತ್ ಕೌಶಿಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net