ನಿಮ್ಹಾನ್ಸ್​​ನಲ್ಲಿ ಜೆಆರ್​ಎಫ್ ಆಗಲು ಅರ್ಹತೆ ಏನು?

nimhans
Published on

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ( ನಿಮ್ಹಾನ್ಸ್) ಯಲ್ಲಿ ಜೂನಿಯರ್ ರಿಸರ್ಚ್ ಫೆಲೋ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜೀವ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಕುರಿತು ಹೆಚ್ಚಿನ ಮಾಹಿತಿಗೆ ವೆಬ್​ಸೈಟ್​​ನಲ್ಲಿರುವ ಅಧಿಸೂಚನೆ ನೋಡಿ.

ಗರಿಷ್ಠ ವಯೋಮಿತಿ 32 ವರ್ಷ ನಿಗದಿಪಡಿಸಲಾಗಿದೆ. ಎನ್​ಇಟಿ/ ಜಿಎಟಿಇ ಅರ್ಹತೆ ಗಳಿಸಿದ ಅಭ್ಯರ್ಥಿಗಳಿಗೆ ಮಾಸಿಕ 32,500/- ಹಾಗೂ ಈ ಅರ್ಹತೆ ಯಿಲ್ಲದ ಅಭ್ಯರ್ಥಿಗಳಿಗೆ ಮಾಸಿಕ 20,800 ರೂ. ವೇತನ ನಿಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರಿಸ್ಯೂಮ್ ಮತ್ತು ಅಗತ್ಯ ದಾಖಲಾತಿಗಳನ್ನು adbs.project@gmail.com. ಆಗಸ್ಟ್ 10 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ https://nimhans.ac.in/ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net