More

    ನೀಟ್ – ಸೂಪರ್ ಸ್ಪೆಷಾಲಿಟಿ ಪರೀಕ್ಷೆ ಸೆಪ್ಟೆಂಬರ್ 15 ಕ್ಕೆ

    ನವದೆಹಲಿ: ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ವೇಳಾಪಟ್ಟಿಯನ್ನು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ (ಎನ್‌ಬಿಇ) ಅಧಿಕೃತ ವೆಬ್‌ಸೈಟ್‌ನಲ್ಲಿ ಭಾನುವಾರ ಬಿಡುಗಡೆ ಮಾಡಿದೆ.
    ವೇಳಾಪಟ್ಟಿಯ ಪ್ರಕಾರ, ನೀಟ್-ಎಸ್ಎಸ್ -ಕಂಪ್ಯೂಟರ್ ಆಧಾರಿತ ಪರೀಕ್ಷೆ ಸೆಪ್ಟೆಂಬರ್ 15 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.
    ಪ್ರವೇಶ ಪರೀಕ್ಷೆಗೆ ಆಗಸ್ಟ್ 3 ರಿಂದ ಆಗಸ್ಟ್ 23 ರವರೆಗೆ natboard.edu.in ನಲ್ಲಿ ಆನ್​​ಲೈನ್ ಅರ್ಜಿ ಸಲ್ಲಿಸಬಹುದು.

    ಇದನ್ನೂ ಓದಿ:  ಬಾಲಿವುಡ್​ ತಾರೆಯರ ರಕ್ಷಾಬಂಧನ…

    “ನೀಟ್-ಎಸ್‌ಎಸ್ ಇದು ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಕಾಯ್ದೆ, 2016 ರ ಪ್ರಕಾರ ವಿವಿಧ ಡಿಎಂ / ಎಂಸಿಎಚ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಏಕ ಪ್ರವೇಶ ಪರೀಕ್ಷೆಯಾಗಿ ಸೂಚಿಸಲಾದ ಅರ್ಹತಾ/ ರ್ಯಾಂಕಿಂಗ್ ಪರೀಕ್ಷೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್ ಎಸ್‌ಎಸ್‌ ಮೂಲಕ ಮೆರಿಟ್ ಅಭ್ಯರ್ಥಿಗಳನ್ನು ಡಿಎನ್‌ಬಿ ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಆಯ್ದುಕೊಳ್ಳುತ್ತದೆ.
    ನೀಟ್-ಎಸ್ಎಸ್ ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 25 ರೊಳಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.
    ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://natboard.edu.in ಗೆ ಭೇಟಿ ನೀಡಬಹುದು.

    ಕರೊನಾ ಗೆದ್ದ ದಾಸನದೊಡ್ಡಿ ಕಾಮೇಗೌಡಗೆ ಪುಷ್ಪವೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts