ಕರೊನಾ ಗೆದ್ದ ದಾಸನದೊಡ್ಡಿ ಕಾಮೇಗೌಡಗೆ ಪುಷ್ಪವೃಷ್ಟಿ

kamegowda -corona
Published on

ಮಂಡ್ಯ: ಕರೊನಾ ಸೋಂಕಿಗೆ ಒಳಗಾಗಿದ್ದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕಾಮೇಗೌಡ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ಸೋಂಕಿನಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಮಿಮ್ಸ್​ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತದಿಂದ ಅವರಿಗೆ ಪುಷ್ಪವೃಷ್ಟಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಮೇಗೌಡ, ಆಸ್ಪತ್ರೆಯಲ್ಲಿ ವೈದ್ಯರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ಏನಾಗುತ್ತಿದ್ದೆ ಎಂಬುದು ಗೊತ್ತಿರಲಿಲ್ಲ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್​, ಮಿಮ್ಸ್​ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್​, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್​.ಪಿ. ಮಂಚೇಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್​.ಧನಂಜಯ ಇತರರಿದ್ದರು. ಕಾಮೇಗೌಡ ಅವರನ್ನು ಆರೋಗ್ಯ ಇಲಾಖೆಯ ವಿಶೇಷ ವಾಹನದಲ್ಲಿ ಅವರ ಸ್ವಗ್ರಾಮ ದಾಸನದೊಡ್ಡಿಗೆ ಕಳುಹಿಸಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net