More

    ವಿವಿ ಡೇಟಾ ಸೇಫ್​, ಪರೀಾ ನಿರ್ವಹಣಾ ಸಂಸ್ಥೆಯಿಂದ ಶೈಣಿಕ ದತ್ತಾಶ ಮರಳಿ ಪಡೆದ ಮಂಗಳೂರು ವಿವಿ

    ಶ್ರವಣ್​ಕುಮಾರ ನಾಳ, ಮಂಗಳೂರು

    ಮಂಗಳೂರು ವಿವಿ ಪರೀಾ ನಿರ್ವಹಣೆ ವಹಿಸುತ್ತಿದ್ದ ಮೈಸೂರು ಮೂಲದ ಖಾಸಗಿ ಸಂಸ್ಥೆಯ ತೆಕ್ಕೆಯಲ್ಲಿದ್ದ ಮಂಗಳೂರು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಸೇರಿದಂತೆ ಸಮಗ್ರ ದತ್ತಾಂಶವನ್ನು ಮಂಗಳೂರು ವಿವಿಯ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ.

    2015 ರಿಂದ 2021ರ ವರೆಗೆ ಮಂಗಳೂರು ವಿವಿಯ ಪರೀಾ ನಿರ್ವಹಣೆಯನ್ನು ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ಈ ಸಂಸ್ಥೆಗೆ 5 ವರ್ಷದಲ್ಲಿ ಪರೀಕ್ಷಾ ನಿರ್ವಹಣಾ ವೆಚ್ಚ 11ಕೋ. ರೂ ಅಧಿಕ ಮೊತ್ತ ವಿವಿ ಪಾವತಿಸಿದೆ. ಗುತ್ತಿಗೆ ಸಮಯ ಪೂರ್ಣ ಗೊಳ್ಳುತ್ತಿದ್ದಂತೆ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಸಂಸ್ಥೆಯು ತನ್ನ ಗುತ್ತಿಗೆ ಅವಧಿಯನ್ನು ನವೀಕರಿಸುವ ಕಸರತ್ತು ನಡೆಸಿದೆ. ಈ ಮಧ್ಯೆ 2021ರಿಂದ ಮಂಗಳೂರು ವಿವಿಯು ಸಾಫ್ಟ್​ವೇರ್​ ಅಭಿವೃದ್ದಿಪಡಿಸಿ ವಿವಿಯಿಂದಲೇ ಪರೀಕ್ಷಾ ನಿರ್ವಹಣೆ ನಡೆಸಲು ತೀರ್ಮಾನಿಸಿ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಯಿಂದ ಸಮಗ್ರ ಡಾಟಾ ಹಿಂತುರುಗಿಸುವಂತೆ ಸೂಚಿಸಿತ್ತು. ಆದರೆ ಈ ಸಂಸ್ಥೆ ವಿವಿಯ ಆದೇಶವನ್ನು ತಿರಸ್ಕರಿಸಿ  ಲಾಂತರ ಡಾಟಾವನ್ನು ತನ್ನಲ್ಲೇ ಇರಿಸಿಕೊಂಡಿತ್ತು. ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಸಂಸ್ಥೆ ಡಾಟಾ ಮರಳಿಸದ ಕಾರಣ ವಿವಿಯಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳೇ ಲಭ್ಯವಿರುತ್ತಿರಲಿಲ್ಲ.

    *ಡೇಟಾ ಮರಳಿ ಪಡೆದ ವಿವಿ

    ವಿವಿ ಪರೀಾ ನಿರ್ವಹಣೆ ಗುತ್ತಿಗೆ ಪಡೆದ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಯ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ಶೈಕ್ಷಣಿಕ ದತ್ತಾಂಶ ಮರಳಿಸದೆ ವಿವಿಯ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯುಂಟಾಗಿತ್ತು. ಈ ಬಗ್ಗೆ ಸಮಗ್ರ ತನಿಖೆಗೆ ಮುಂದಾಗಿರುವ ಮಂಗಳೂರು ವಿವಿ ಸಿಂಡಿಕೇಟ್​ ಮಂಡಳಿಯು ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ತೀರ್ಮಾನಿಸಿ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಸಂಸ್ಥೆಯನ್ನು ಕಪು$್ಪಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಅಧಿಕೃತ ರ್ನಿಣಯ ಪ್ರತಿ ನೀಡಿತ್ತು. ಸರ್ಕಾರ ಮಧ್ಯಪ್ರವೇಶಿಸುತ್ತಿದ್ದಂತೆ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಸಂಸ್ಥೆ ಸಮಗ್ರ ದತ್ತಾಂಶವನ್ನು ಮರಳಿಸಲು ಒಪ್ಪಿಗೆ ಸೂಚಿಸಿದ್ದರೂ ಯಾವುದೇ ದತ್ತಾಂಶ ವಿವಿ ಕೈ ಸೇರಲೇ ಇಲ್ಲ.

    ವಿವಿ ಭದ್ರತೆಯಲ್ಲಿ ಸಮಗ್ರ ಡೇಟಾ

    ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಪರೀಾ ನಿರ್ವಹಣಾ ಸಂಸ್ಥೆಗಳು ಡಾಟಾಗಳನ್ನು ಮರಳಿಸುವುದು ಅಗತ್ಯ. 2010ರಿಂದ 2015ರ ವರೆಗೆ ಮೆಟೈ ಟೆಕ್ನೋಲಜಿ (ಞಛಿಠಿಚಜಿ ಠಿಛ್ಚಿಜ್ಞಟ್ಝಟಜಢ)ಸಂಸ್ಥೆ ವಿವಿ ಪರೀಕ್ಷಾ ನಿರ್ವಹಣೆ ನಡೆಸುತ್ತಿತ್ತು. ತನ್ನ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ 2015ರಲ್ಲಿ ನೂತನ ಪರೀಾ ನಿರ್ವಹಣಾ ಸಂಸ್ಥೆಯಾದ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಗೆ ತನ್ನೆಲ್ಲಾ ಡಾಟಾಗಳನ್ನು ವಿವಿಯ ಮೂಲಕ ಹಿಂತಿರುಗಿಸಿದೆ. ಇತ್ತೀಚಿನ ವರೆಗೆ ಮಂಗಳೂರು ವಿವಿ ವ್ಯಾಪ್ತಿಯ ಸಮಗ್ರ ವಿದ್ಯಾರ್ಥಿಗಳ ಡಾಟಾ, ಫಲಿತಾಂಶ ವಿವರ ಸೇರಿದಂತೆ 10 ಲಕ್ಷಕ್ಕೂ ಅಧಿಕ ಡಾಟಾ ಪ್ರಸ್ತುತ ಖಾಸಗಿ ಸಂಸ್ಥೆ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಅಧೀನದಲ್ಲಿತ್ತು. ಡಾಟಾ ಮರಳಿಸದ ಕಾರಣ ವಿವಿಯಲ್ಲೂ ಶೈಕ್ಷಣಿಕ ದಾಖಲೆ ಇಲ್ಲ. ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಅಧೀನದಲ್ಲಿ ಭದ್ರತೆಯಲ್ಲಿದ್ದ ಸಮಗ್ರ ಶೈಕ್ಷಣಿಕ ಡಾಟಾವು ಪ್ರಸ್ತುತ ವಿವಿ ಭದ್ರತೆಯ ವಶದಲ್ಲಿದೆ.

    ಏನಿದು ವಿವಿ ಡೇಟಾ

    ಮಂಗಳೂರು ವಿವಿ ಹಾಗೂ ವಿವಿ ವ್ಯಾಪ್ತಿಯ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ 10ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮಗ್ರ ದಾಖಲೆ, ಅಂಕಪಟ್ಟಿ, ಪರೀಾ ದತ್ತಾಂಶ, ಟಿಕೋತ್ಸವ, ಸಂಶೋಧನಾ ಪತ್ರ ಸೇರಿದಂತೆ ಸಮಗ್ರ ಮಾಹಿತಿ. ಸರ್ಕಾರಿ ಅಥವಾ ಇನ್ನಿತರ ಉದ್ಯೋಗ ಪಡೆಯುವ ಸಂದರ್ಭ ಶೈಕ್ಷಣಿಕ ದಾಖಲೆ, ದಾಖಲೆ ಪರಿಶೀಲನಾ ನಿರಾಕ್ಷೇಪನಾ ಪತ್ರ ಅಗತ್ಯ. ಇಂತಹ ದಾಖಲೆಗಳಿಗೆ ವಿವಿಗೆ ಅರ್ಜಿ ಸಲ್ಲಿಸಿದರೆ ಪರೀಾ ನಿರ್ವಹಣೆ ವಹಿಸುತ್ತಿದ್ದ ಸಂಸ್ಥೆಯಲ್ಲಿದ್ದ ದಾಖಲೆಯ ಆಧಾರದಲ್ಲಿ ಪರಿಶೀಲನೆ ಮಾಡಿ ಎನ್​ಒಸಿ ನೀಡಲಾಗುತ್ತಿತ್ತು. ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಅಠ್ಟಿಠ ಠಿಛ್ಚಿಜ್ಞಟ್ಝಟಜಢ ಸಂಸ್ಥೆ ವಿವಿಗೆ ಈ ಡಾಟಾ ಮರಳಿಸದ ಕಾರಣ ವಿವಿ ಡೇಟಾಗೆ ಅಭದ್ರತೆ ಕಾಡಿತ್ತು.

    ಮಂಗಳೂರು ವಿವಿಯಲ್ಲಿ 10ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಸೇರಿದಂತೆ ಸಮಗ್ರ ದತ್ತಾಂಶವು ಮಂಗಳೂರು ವಿವಿಯ ನಿಯಂತ್ರಣದಲ್ಲಿದೆ. ಇದರ ನಿರ್ವಹಣೆಗೆಂದೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

    > ಪ್ರೊ. ಪಿಎಲ್​ ಧರ್ಮ, ಉಪಕುಲಪತಿ

    ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts