ವಿಭಿನ್ನವಾಗಿ ಅಭಿಮಾನ ತೋರ್ಪಡಿಸಿದ ಜೂ. ಎನ್​ಟಿಆರ್​ ಅಭಿಮಾನಿ; ವ್ಯಾಪಕ ಮೆಚ್ಚುಗೆ

JR NTR Fan
Published on

ರಾಯಲಸೀಮಾ: ಅಭಿಮಾನಿಗಳು ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ನಾನಾತರಹ ಹೊರಹಾಕುತ್ತಾರೆ. ಕೆಲವರು ಫೋಟೋ ಇಟ್ಟು ಪೂಜಿಸಿದರೆ ಇನ್ನು ಕೆಲವು ಅಭಿಮಾನಿಗಳು ಅವರ ಹೆಸರು ಹಾಗೂ ಫೋಟೋವನ್ನು ಹಚ್ಚೆ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ. ಇದೀಗ ಜೂ.​ ಎನ್​ಟಿಆರ್​ ಅಭಿಮಾನಿಯೊಬ್ಬರು ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ತುಸು ವಿಭಿನ್ನವಾಗಿ ತೋರ್ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ.

ಆಂಧ್ರಪ್ರದೇಶದ ರಾಯಲಸೀಮಾದಲ್ಲಿ ಜೂ. ಎನ್​ಟಿಆರ್​ ಅಭಿಮಾನಿಯೊಬ್ಬರು ತಮ್ಮ ಮನೆ ನಿರ್ಮಿಸುತ್ತಿದ್ದು, ಇಟ್ಟಿಗೆಗಳ ಮೇಲೆ ನೆಚ್ಚಿನ ನಟನ ಹೆಸರನ್ನು ಹಾಕಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್​ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಅಭಿಮಾನಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ರೀತಿಯ ಅಭಿಮಾನಿಗಳು ಕಾಣ ಸಿಗುವುದು ತೀರಾ ಅಪರೂಪ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಮನೆ ಕಟ್ಟಿದ ನಂತರ ಪ್ಲ್ಯಾಸ್ಟರಿಂಗ್​ ಮಾಡಿದರೆ ಯಾವ ನಟನ ಹೆಸರು ಕಾಣುಸಿಗುವುದಿಲ್ಲ ಎಂದು ಅಭಿಮಾನಿಯ ನಡೆಯಯನ್ನು ತಮ್ಮ ಕಮೆಂಟ್​ಗಳ ಮೂಲಕ ಕೆಲವರು ಟೀಕಿಸಿದ್ದಾರೆ.

ಜೂನಿಯರ್ ಎನ್​ಟಿಆರ್​ ಪ್ರಸ್ತುತ ದೇವರಾ: ಭಾಗ 1ಗಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ, ಇದರಲ್ಲಿ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಸಹ ನಾಯಕರಾಗಿ ನಟಿಸಿದ್ದಾರೆ. ಪ್ರಕಾಶ್ ರಾಜ್, ಜಿಸ್ಸು ಸೇನ್‌ಗುಪ್ತ, ಶ್ರೀಕಾಂತ್, ಟಾಮ್ ಚಾಕೊ, ನರೈನ್ ಮತ್ತು ಮುರಳಿ ಶರ್ಮಾ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net