More

    ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿದ್ದರೆ ಮೊದಲು ನನಗೆ ಮದುವೆ ಮಾಡಿಸಿ ಎಂದ ಶಿಕ್ಷಕ; ಸೇವೆಯಿಂದ ಅಮಾನತು

    ಭೋಪಾಲ್: ಮನುಷ್ಯ ಜೀವನದಲ್ಲಿ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ತಲುಪುತ್ತಾನೆ ಎಂಬ ವಿಚಾರವನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಇದೀಗ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಾವು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿದ್ದರೆ ತಮಗೆ ಮದುವೆ ಮಾಡಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.

    ಮಧ್ಯಪ್ರದೇಶ ಸತ್ನಾ ಜಿಲ್ಲೆಯ ಅಮರಪಟ್ಟಣದ ಶಾಲೆಯ ಶಿಕ್ಷಕ ಅಖಿಲೇಶ್​ ಕುಮಾರ್​ ಮಿಶ್ರಾ ತಮಗೆ 35 ವರ್ಷಗಳಾದರೂ ಇನ್ನು ಮದುವೆಯಾಗಿಲ್ಲ. ನನ್ನ ರಾತ್ರಿಗಳು ವ್ಯರ್ಥವಾಗುತ್ತಿವೆ ದಯವಿಟ್ಟು ನನಗೆ ಮದುವೆ ಮಾಡಿಸಿ ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

    ಪತ್ರದಲ್ಲೇನಿದೆ?

    ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಮಗೆ ಈಗಾಗಲೇ 35 ವರ್ಷಗಳು ತುಂಬಿದ್ದು, ಮದುವೆಯಾಗಿಲ್ಲ. ರಾತ್ರಿಗಳನ್ನು ಏಕಾಂಗಿಯಾಗಿ ಕಳೆಯುತ್ತಿದ್ದು, ನನಗೆ ಮೊದಲು ಮದುವೆ ಮಾಡಿಸಿ. ಅದರಂತೆ ವಧುವಿನ ಕಡೆಯಿಂದ ನನಗೆ 3.5 ಲಕ್ಷ ರೂಪಾಯಿ ವರದಕ್ಷಿಣೆ, ಮನೆ ಖರೀದಿಸಲು ಬ್ಯಾಂಕ್​ ಲೋನ್, ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಒಂದು ವೇಳೆ ಈಡೇರಿಸದಿದ್ದಲ್ಲಿ ತಾವು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕರು ಮಾಡುವ ಘೋಷಣೆ, ಆಡುವ ಮಾತುಗಳು ನಾಟಕೀಯವಾಗಿದೆ: ಪ್ರಧಾನಿ ನರೇಂದ್ರ ಮೋದಿ

    ಇತ್ತ ಶಿಕ್ಷಕನ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರಿ ಅಧಿಕಾರಿಗಳು ಮೊದಲೊಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ. ನೋಟಿಸ್​ಗೆ ಶಿಕ್ಷಕ ಅಖಿಲೇಶ್​ ಪ್ರತಿಕ್ರಿಯಿಸದ ಕಾರಣ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಸೇವೆಯಿಂದ ವಜಾ ಮಾಡಲಾಗಿದೆ.

    ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ಮುಗಿಲು ಮುಟ್ಟಿದೆ. ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts