More

    ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕರು ಮಾಡುವ ಘೋಷಣೆ, ಆಡುವ ಮಾತುಗಳು ನಾಟಕೀಯವಾಗಿದೆ: ಪ್ರಧಾನಿ ನರೇಂದ್ರ ಮೋದಿ

    ಭೋಪಾಲ್: ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕರು ಮಾಡುತ್ತಿರುವ ಘೋಷಣೆಗಳು ಹಾಗೂ ಆಡುತ್ತಿರುವ ಮಾತುಗಳೆಲ್ಲವೂ ಸಿನಿಮೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

    ಮದ್ಯಪ್ರದೇಶದ ರತ್ಲಾಂನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ನಲ್ಲಿ ಈಗಾಗಲೇ ಅಧಿಕಾರಕ್ಕಾಗಿ ಬಡಿದಾಟ ಶುರುವಾಗಿದ್ದು, ಬಟ್ಟೆ ಹರಿದುಕೊಳ್ಳುವ ವಿಚಾರಕ್ಕೂ ಜಗಳವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ​

    ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕರು ಜನರನ್ನು ಉದ್ದೇಶಿಸಿ ಆಡುತ್ತಿರುವ ಮಾತುಗಳು, ಮಾಡುತ್ತಿರುವ ಘೋಷಣೆಗಳು ಎಲ್ಲಾ ಸಿನಿಮೀಯ ಶೈಲಿಯಲ್ಲಿದ್ದು, ಸಿನಿಮಾದಲ್ಲಿ ಬಂದು ಹೋಗುವ ನಟರಂತೆ ಕಾಂಗ್ರೆಸ್​ ನಾಯಕರು ವರ್ತಿಸುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಈಗಾಗಲೇ ಅಧಿಕಾರಕ್ಕಾಗಿ ಇಬ್ಬರು ನಾಯಕರ ನಡುವೆ ಬಡಿದಾಟ ಶುರುವಾಗಿದ್ದು, ಅಂಗಿ ಅರಿದುಕೊಳ್ಳುವ ವಿಚಾರಕ್ಕೂ ಕಿತ್ತಾಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಅವರು ಜನತೆಯ ಬಟ್ಟೆಯನ್ನು ಅರಿಯುವುದು ಶತ ಸಿದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಖಾಸಗಿ ಬಸ್ಸಿಗೆ ಕಾರು ಡಿಕ್ಕಿ; ನಾಲ್ವರು ಸಾವು, ಓರ್ವ ಗಂಭೀರ

    ಇದು ಬರೀ ಟ್ರೇಲರ್​ ಅಷ್ಟೇ, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್​ನ ನೈಜ ಮುಖವಾಡ ಜನರೆದುರು ಕಳಚಿ ಬೀಳಲಿದೆ. ಕಾಂಗ್ರೆಸ್​ನೊಳಗಿನ ಆಂತರಿಕ ಸಂಘರ್ಷ ಬೀದಿ ರಂಪವಾಗಲಿದೆ. ಇದು ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ರಾಜ್ಯದಲ್ಲಿ ಕಾಂಗ್ರೆಸ್​ ಕುಟುಂಬ ರಾಜಕಾರಣದ ವಿರುದ್ಧ ನಡೆಯುತ್ತಿರುವ ಹೋರಾಟ ಇದರಲ್ಲಿ ಬಿಜೆಪಿ ಜಯಿಸಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೇಶದ ಜನತೆಯ ಕನಸನ್ನು ನನಸಾಗಿಸುವುದು ನಮ್ಮ ಕರ್ತವ್ಯವಾಗಿದ್ದು, ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ನಂತರ ಮುಂದಿನ ಐದು ವರ್ಷಗಳ ಕಾಲ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts