More

    ಏಕದಿನ ವಿಶ್ವಕಪ್​ನಲ್ಲಿ ಸ್ಮರಣೀಯ ಶತಕ; ಕ್ರಿಕೆಟ್ ದಿಗ್ಗಜನ ದಾಖಲೆ ಸರಿಗಟ್ಟಿದ್ದ ರಚಿನ್

    ಬೆಂಗಳೂರು: ಹಾಲಿ ಏಕದಿನ ವಿಶ್ವಕಪ್​ ಋತುವಿನಲ್ಲಿ ತಮ್ಮ ಅಮೋಘ ಆಟದ ಮೂಲಕ ಭರವಸೆಯ ಬ್ಯಾಟ್ಸ್​ಮನ್ ಎನ್ನಿಸಿರುವ ಭಾರತ ಮೂಲದ ನ್ಯೂಜಿಲೆಂಡ್​ ಆಟಗಾರ ರಚಿನ್ ರವೀಂದ್ರ ಶನಿವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಗಳಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಚಿನ್ ರವೀಂದ್ರ (108 ರನ್, 94 ಎಸೆತ, 15 ಬೌಂಡರಿ, 1 ಸಿಕ್ಸರ್) ತಮ್ಮ ಕ್ರಿಕೆಟ್​ ಜೀವನದಲ್ಲಿ ಸ್ಮರಣೀಯ ಸಾಧನೆ ಮಾಡಿದ್ದಾರೆ.

    ಇದಲ್ಲದೆ ರಚಿನ್​ ಏಕದಿನ ವಿಶ್ವಕಪ್​ನಲ್ಲಿ ಮೂರನೇ ಶತಕ ದಾಖಲಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ 25 ವರ್ಷಕ್ಕೂ ಮುನ್ನ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಸಚಿನ್​ ತೆಂಡುಲ್ಕರ್​ ಅವರ ದಾಖಲೆಯನ್ನು ರಚಿನ್​ ಮುರಿದಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಅವರ ಆಲೋಚನೆಗಳನ್ನು ಬದಲಾಯಿಸಲು ಎಂದಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

    ಚೊಚ್ಚಲ ಏಕದಿನ ವಿಶ್ವಕಪ್ ಆಡುತ್ತಿರುವ 23 ವರ್ಷದ ರಚಿನ್ ರವೀಂದ್ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 3 ಶತಕಗಳನ್ನು ಗಳಿಸಿದ್ದು, ಸಚಿನ್​ ತೆಂಡುಲ್ಕರ್​ ಎರಡು ಶತಕಗಳನ್ನು ದಾಖಲಿಸುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದರು.

    ನ್ಯೂಜಿಲೆಂಡ್​ ತಂಡದ ಆಟಗಾರ ರಚಿನ್​ ರವೀಂದ್ರ ಮೂಲತಃ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜತೆ ಅಪಾರ ನಂಟು ಹೊಂದಿದ್ದಾರೆ. ರಾಹುಲ್​ ದ್ರಾವಿಡ್​ ಹಾಗೂ ಸಚಿನ್ ತೆಂಡುಲ್ಕರ್​ ಮೇಲಿನ ಪ್ರೀತಿಗೆ ಅವರ ತಂದೆ ರವೀಂದ್ರ ತಮ್ಮ ಮಗನಿಗೆ ರಚಿನ್ ಎಂದು ಹೆಸರಿಟ್ಟಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಕ್ರೀಡಾಭಿಮಾನಿಗಳ ಪ್ರೀತಿಗೆ ರಚಿನ್​ ಪಾತ್ರರಾಗಿದ್ದು, ಘೋಷಣೆಗಳನ್ನು ಕೂಗಿ ಆಟಗಾರರನನ್ನು ಹುರಿದುಂಬಿಸಿದ್ದು, ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts