

ಆಂಧ್ರಪ್ರದೇಶ: ಶಿವ ಕೊರಟಾಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಆ್ಯಕ್ಷನ್ ಜಾನರ್ನ 'ದೇವರ' ಚಿತ್ರ ಸದ್ಯ ಚಿತ್ರೀಕರಣ ಹಂತದಲ್ಲಿದ್ದು, ಈ ಚಿತ್ರ ಮುಂದಿನ ವರ್ಷ ಏಪ್ರಿಲ್ 5, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.
ಈ ಮಧ್ಯೆ ಜೂ. ಎನ್ಟಿಆರ್ ಅಭಿನಯದ ಬ್ಲಾಕ್ಬಸ್ಟರ್ ಕಾಮಿಡಿ ಚಲನಚಿತ್ರ 'ಅಧುರ್ಸ್' ಇದೇ ನವೆಂಬರ್ 18 ರಂದು ಅದ್ದೂರಿ ಮರು ಬಿಡುಗಡೆಗೆ ಸಿದ್ಧವಾಗಿದೆ. ಇದರೊಟ್ಟಿಗೆ ಈ ಚಿತ್ರದ ಟೀಸರ್ ಅನ್ನು ಎನ್ಟಿಆರ್ ಅವರ ಬೃಹತ್ ಸಂಖ್ಯೆಯ ಅಭಿಮಾನಿಗಳಿಗೆ ತೋರಿಸಲು ಚಿತ್ರತಂಡ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ. ಗುರುವಾರ (ಅ.19) ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಾದ್ಯಂತ ಈ ಟೀಸರ್ ಅನಾವರಣಗೊಳ್ಳಲಿದೆ.
ಚಿತ್ರದಲ್ಲಿ ನಯನತಾರಾ ಮತ್ತು ಶೀಲಾ ಕೌರ್ ಮಹಿಳಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸಯಾಜಿ ಶಿಂಧೆ, ನಾಸರ್, ತನಿಕೆಲ್ಲ ಭರಣಿ ಸೇರಿದಂತೆ ಹಲವು ಪ್ರತಿಭಾವಂತ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ,(ಏಜೆನ್ಸೀಸ್).