More

    “ಸಂಬಂಧಿಸಿದವರು ಜವಾಬ್ದಾರರಾಗಿರಬೇಕು”: ಗಾಜಾ ಆಸ್ಪತ್ರೆ ದಾಳಿಗೆ ಪ್ರಧಾನಿ ಮೋದಿ ಕಳವಳ

    ನವದೆಹಲಿ: ಗಾಜಾ ಆಸ್ಪತ್ರೆ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಇಸ್ರೇಲ್ ಸೇನೆ-ಹಮಾಸ್ ಬಂಡುಕೋರರ ನಡುವಿನ ಯುದ್ಧದಲ್ಲಿ ಸಂಭವಿಸಿರುವ ನಾಗರಿಕ ಸಾವುನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: “ವೈವಾಹಿಕ ಅತ್ಯಾಚಾರ”ಕ್ಕೆ “ಸೆಕ್ಸ್ ಸೀನ್” ಎನ್ನೋದೇಕೆ?: ನಟಿ ಮೆಹ್ರೀನ್ ಪಿರ್ಜಾದಾಗೆ ಬೇಸರ

    ಬುಧವಾರದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದಾಳಿಯಲ್ಲಿನ ಸಾವುಗಳಿಂದ ನಾನು “ತುಂಬಾ ಆಘಾತಕ್ಕೊಳಗಾಗಿದ್ದೇನೆ” ಸತ್ತವರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

    ಆಸ್ಪತ್ರೆ ಮೇಲಿನ ಭೀಕರ ದಾಳಿಗೆ ಯಾರು ಹೊಣೆ? ನಾಗರಿಕ ಸಾವುನೋವು ಹೆಚ್ಚುತ್ತಿರುವುದು ಸರಿಯಲ್ಲ. ಆಸ್ಪತ್ರೆ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವವರನ್ನು ಹೊಣೆಗಾರರನ್ನಾಗಿಸಿ ಶಿಕ್ಷೆ ವಿಧಿಸುವಂತಾಗಬೇಕು ಎಂದು ಕರೆ ನೀಡಿದರು.

    “ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಜೀವಹಾನಿಯ ಬಗ್ಗೆ ತೀವ್ರ ಆಘಾತವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ನಮಸ್ಫೂರ್ವಕ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳು ಗಂಭೀರವಿಷಯವಾಗಿದೆ. ಇದು ನಾಗರಿಕರ ಬಗೆಗಿನ ಕಾಳಜಿಯ ವಿಷಯವಾಗಿದೆ ಎಂದು ಪ್ರಧಾನಿ “X”(ಎಕ್ಸ್‌)ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಕರೆದ ಮೊದಲ ವಿಶ್ವ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು 500 ಜನರನ್ನು ಕೊಂದ ಗಾಜಾದ ಆಸ್ಪತ್ರೆಯ ಮೇಲೆ ಮಂಗಳವಾರದ ನಡೆದ ದಾಳಿಯನ್ನು ಖಂಡಿಸಿದ್ದಾರೆ.

    ಮೀಠಾ ಭಾರತ ಮಳಿಗೆ ಉದ್ಘಾಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts