More

    ಮೀಠಾ ಭಾರತ ಮಳಿಗೆ ಉದ್ಘಾಟನೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿರುವ ಯುರೇಕಾ ಟಾವರ್​ನಲ್ಲಿ ‘ಮೀಠಾ ಭಾರತ’ ಮಳಿಗೆಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಬುಧವಾರ ಉದ್ಘಾಟಿಸಿದರು.

    ಮಳಿಗೆಯಲ್ಲಿರುವ ವಿವಿಧ ಸಿಹಿ ತಿನಿಸು, ಖಾರದಾಣಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಮೀಠಾ ಭಾರತ’ ಮಾಲೀಕ ಕೃಷ್ಣ ಕಲಬುರ್ಗಿ, ಕಲಬುರ್ಗಿ ಪರಿವಾರದ ರಾಜು ಕಲಬುರ್ಗಿ, ಆನಂದ ಕಲಬುರ್ಗಿ, ಅರವಿಂದ ಕಲಬುರ್ಗಿ, ಸಿದ್ಧಾರ್ಥ ಕಲಬುರ್ಗಿ, ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿ.ಎಸ್.ವಿ. ಪ್ರಸಾದ ಇತರರು ಇದ್ದರು.

    ‘ಖಾಜು ಐಟೆಮ್್ಸ, ಮಾವಾ, ಬೆಂಗಾಲಿ ಸ್ವೀಟ್ಸ್, ಡ್ರೖೆ ಫ್ರ್ಯೂಟ್ಸ್, ಫ್ರ್ಯೂಟ್ ಐಟೆಮ್್ಸ, ನ್ಯಾಮ್​ನ್, ಚಾಟ್ಸ್ ಹೀಗೆ ವಿವಿಧ ರೀತಿಯ 200ಕ್ಕೂ ಹೆಚ್ಚು ತಿನಿಸುಗಳು ಇಲ್ಲಿ ಲಭ್ಯ. ಸದ್ಯ ಹುಬ್ಬಳ್ಳಿಯಲ್ಲಿ ‘ಮೀಠಾ ಭಾರತ’ ಆರಂಭಿಸಲಾಗಿದೆ. ಬೇಕರಿಯನ್ನೂ ಆರಂಭಿಸಲಾಗುವುದು. ಈಗಾಗಲೇ ವಾಣಿಜ್ಯ ನಗರಿಯ ಜನರಿಗೆ ಬಹಳಷ್ಟು ಇಷ್ಟವಾಗಿದೆ. ವಿಶೇಷ ತಿನಿಸುಗಳು ಇಲ್ಲಿದ್ದು, ಬ್ರ್ಯಾಂಡ್ ಸೃಷ್ಟಿಯಾಗಿದೆ’ ಎಂದು ‘ಮೀಠಾ ಭಾರತ’ ಮಾಲೀಕ ಕೃಷ್ಣ ಕಲಬುರ್ಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts