More

    ಎಲಾನ್​ ಮಸ್ಕ್​ನಿಂದ ಮತ್ತೊಂದು ಶಾಕ್; ಇನ್ನು ‘ಎಕ್ಸ್’ ಬಳಸಲಿಕ್ಕೂ ಶುಲ್ಕ!?

    ಬೆಂಗಳೂರು: ಟ್ವಿಟರ್​ ಖರೀದಿಸಿ ಬಹಳಷ್ಟು ಬದಲಾವಣೆ ಮಾಡಿ ಅದರ ಹೆಸರನ್ನು ಎಕ್ಸ್​ ಎಂದು ಬದಲಾಯಿಸಿರುವ ಎಲಾನ್ ಮಸ್ಕ್ ಇದೀಗ ಬಳಕೆದಾರರಿಗೆ ಇನ್ನೊಂದು ಶಾಕ್ ನೀಡಿದ್ದಾರೆ. ಆ ಪ್ರಕಾರ ಎಕ್ಸ್ ಬಳಸುವವರು ವಾರ್ಷಿಕ ಚಂದಾ ನೀಡುವುದು ಅನಿವಾರ್ಯ ಆಗಲಿದೆ.

    ಇತ್ತೀಚಿನ ಬದಲಾವಣೆ ಪ್ರಕಾರ ಎಕ್ಸ್ ಬಳಸಲು ವಾರ್ಷಿಕ ಒಂದು ಡಾಲರ್​ ನೀಡಬೇಕಾಗುತ್ತದೆ. ಸಮಾಧಾನದ ಸಂಗತಿ ಎಂದರೆ ಇದನ್ನು ಎಲ್ಲರಿಗೂ ಅನ್ವಯಿಸಿಲ್ಲ. ಸದ್ಯ ಪ್ರಾಯೋಗಿಕವಾಗಿ ಫಿಲಿಪ್ಪೈನ್ಸ್​ ಮತ್ತು ನ್ಯೂಜಿಲೆಂಡ್​ನಲ್ಲಿ ಅದೂ ಹೊಸ ಬಳಕೆದಾರರಿಗೆ ಸೀಮಿತವಾಗಿ ಇದನ್ನು ಜಾರಿಗೆ ತರಲಾಗಿದೆ.

    ಹೀಗಾಗಿ ಅಲ್ಲಿನ ಹೊಸ ಬಳಕೆದಾರರು ಪೋಸ್ಟ್​, ರಿಪೋಸ್ಟ್, ಲೈಕ್, ಬುಕ್​ಮಾರ್ಕ್​ ಇತ್ಯಾದಿಗಳನ್ನು ಮಾಡಬೇಕು ಎಂದರೆ 1 ಡಾಲರ್ ನೀಡಿ ವಾರ್ಷಿಕ ಚಂದಾ ಪಡೆದಿರಬೇಕು. ಇದನ್ನು ಪಾವತಿ ಮಾಡದವರಿಗೆ ರೀಡ್ ಓನ್ಲಿ ಆಪ್ಷನ್ ಮಾತ್ರ ಲಭ್ಯವಿರಲಿದ್ದು, ಅವರು ಎಕ್ಸ್ ಪೋಸ್ಟ್​​ಗಳನ್ನು ನೋಡುವುದು ಮತ್ತು ಓದುವುದು ಮಾತ್ರ ಸಾಧ್ಯವಾಗಲಿದೆ. ಈಗಾಗಲೇ ಇರುವ ಬಳಕೆದಾರರಿಗೆ ಇದು ಅನ್ವಯಿಸುತ್ತಿಲ್ಲ.

    ನಾನು ಫ್ರೀ ಸ್ಪೀಚ್ ಪರ ಎಂದು ಹೇಳುತ್ತಲೇ ಬಂದಿರುವ ಎಲಾನ್ ಮಸ್ಕ್ ಅವರ ಈ ನಡೆ ಫ್ರೀಡಂ ಆಫ್ ಸ್ಪೀಚ್ ಫ್ರೀ ಅಲ್ಲ ಎಂಬ ಸಂದೇಶ ರವಾನಿಸಿದಂತಿದೆ. ಕೆಲವು ದಿನಗಳ ಹಿಂದೆ ಮಾರ್ಕ್ ಜುಕರ್​​ಬರ್ಗ್ ಕೂಡ ಫೇಸ್​ಬುಕ್​-ಇನ್​ಸ್ಟಾಗ್ರಾಂ ವಿಚಾರದಲ್ಲಿ ಇಂಥದ್ದೇ ಒಂದು ಕ್ರಮಕೈಗೊಂಡಿದ್ದರು.

    #NoBindiNoBusiness | ಹಿಂದೂಗಳಿಂದ ಮತ್ತೆ ಅಭಿಯಾನ, ಟ್ರೆಂಡ್ ಆಯ್ತು ಕ್ಯಾಂಪೇನ್..

    ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts