More

    ಬೈಕರ್​​ ಜತೆ ಮಹಿಳೆಯ ಅನುಚಿತ ವರ್ತನೆ! ಇಂಥವರೂ ಇರ್ತಾರೆ ಹುಷಾರ್​ ಅಂದ್ರು ನೆಟ್ಟಿಗರು

    ನವದೆಹಲಿ: ಕೆಲ ಮಂದಿ ಸಾರ್ವಜನಿಕ ಪ್ರದೇಶಗಳಲ್ಲಿ ತುಂಬಾ ವಿಚಿತ್ರವಾಗಿ ವರ್ತಿಸುವ ಮೂಲಕ ತನ್ನ ಸುತ್ತಮುತ್ತ ಇರುವವರಿಗೆ ತುಂಬಾ ತೊಂದರೆ ಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದೀಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್​ ಆಗುತ್ತಿದೆ.

    ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಆಟೋದಲ್ಲಿ ಕುಳಿತು ಪ್ರಯಾಣಿಸುವಾಗ ಹಿಂದೆ ಬರುತ್ತಿದ್ದ ಬೈಕ್​ ಸವಾರನ ಜತೆಗೆ ಅನುಚಿತವಾಗಿ ವರ್ತಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದರೆ, ಅಸಡ್ಡೆ ಉತ್ತರ ನೀಡಿದ್ದಾಳೆ.

    ವೀಡಿಯೋದಲ್ಲಿ ಬೈಕ್ ಸವಾರನೊಬ್ಬ ಆಟೋವನ್ನು ಓವರ್​ಟೇಕ್​ ಮಾಡಲು ಪ್ರಯತ್ನಿಸಿದಾಗ, ಆಟೋದಲ್ಲಿದ್ದ ಮಹಿಳೆ ಬಾಯಿಯಿಂದ ಗುಟ್ಕಾ ಉಗುಳುತ್ತಾಳೆ. ಇದು ಬೈಕ್​ ಮೇಲೆ ಬೀಳುತ್ತದೆ. ನೋಡಿದವರಿಗೆ ಬೇಕಂತಲೇ ಮಾಡಿರುವಂತೆ ಕಾಣುತ್ತದೆ. ಬಳಿಕ ಬೈಕ್​ ಸವಾರ ಆಟೋವನ್ನು ತಡೆದು, ಮಹಿಳೆಯನ್ನು ಯಾಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನೆ ಮಾಡುತ್ತಾನೆ. ಈ ವೇಳೆ ಉತ್ತರಿಸುವ ಆಕೆ, ಇದು ನಿಮ್ಮ ತಪ್ಪು. ಇಷ್ಟು ಹತ್ತಿರ ಬೈಕ್ ಓಡಿಸಲು ನಿಮಗೆ ಹೇಳಿದ್ದು ಯಾರು? ಎಂದು ಮರು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಬೈಕ್ ಸವಾರ, ರಸ್ತೆಯಲ್ಲಿ ಉಗುಳುತ್ತೀರಾ? ಎಂದು ಪ್ರಶ್ನಿಸುತ್ತಾನೆ. ನೀವು ಸಡನ್​ ಆಗಿ ಬಂದಿದ್ದರಿಂದ ಈ ರೀತಿ ಆಯಿತು ಎಂದು ಮಹಿಳೆ ಹೇಳುತ್ತಾರೆ.

    ನೀನು ನನ್ನ ಬೈಕ್​ ಅನ್ನು ಕ್ಲೀನ್ ಮಾಡಿಕೊಡು ಎಂದು ಬೈಕ್ ಸವಾರ ಕೇಳಿದಾಗ ಮಹಿಳೆ ನಿರಾಕರಿಸಿದ್ದಾಳೆ. ಈ ರೀತಿ ರಸ್ತೆಯಲ್ಲಿ ಉಗುಳುವಾಗ ನಿಮಗೆ ನಾಚಿಕೆ ಆಗಲ್ಲವೇ ಎಂದು ಬೈಕ್​ ಸವಾರ ಮಹಿಳೆಯ ವಿರುದ್ಧ ಕಡಿಕಾರುತ್ತಾನೆ. ಈ 58 ಸೆಕೆಂಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ.

    ಈ ವಿಡಿಯೋ ನೋಡಿದವರು ಇಂತಹವರು ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ಹುಷಾರಾಗಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ವಿಕಲಾಂಗರಿಗೆ 13 ಸ್ಕೂಟರ್​ ಗಿಫ್ಟ್​! ಕೊಟ್ಟ ಮಾತು ಉಳಿಸಿಕೊಂಡ ಲಾರೆನ್ಸ್, ಮನೆ ಕಟ್ಟಿಸಿಕೊಡುವುದಾಗಿಯೂ ಭರವಸೆ​

    ಇದನ್ನು ತಕ್ಷಣವೇ ನಿಲ್ಲಿಸಿ… ಐಪಿಎಲ್​ ತಂಡಗಳು ಮತ್ತು ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts