ಐಸಿಎಫ್​ಎಫ್​ಟಿಆರ್​ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗುವ ಅವಕಾಶ

ICFFTR
Published on

ಲಖನೌ: ಎನ್​ಎಫ್​​ಎಲ್​​ನ ಇಂಡಿಯನ್ ಕೌನ್ಸಿಲ್ ಫಾರ್ ಫರ್ಟಿಲೈಸರ್ಸ್ ಆ್ಯಂಡ್ ಫರ್ಟಿಲೈಸರ್ ಟೆಕ್ನಾಲಜಿ ರಿಸರ್ಚ್ (ಐಸಿಎಫ್​ಎಫ್​​​​ಟಿಆರ್), ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಲಯ ಮತ್ತು ಹುದ್ದೆ ಸಂಖ್ಯೆ: ಕೈಗಾರಿಕಾ ಸಂಶೋಧನೆ-1 ಹುದ್ದೆ ಇದೆ. ಯಾವುದೇ ವಿಭಾಗದಲ್ಲಿ ಬಿ.ಟೆಕ್ ಶೇ. 50 ಅಂಕಗಳೊಂದಿಗೆ ಪಾಸಾಗಿರಬೇಕು.

ಹೊಸ ಮತ್ತು ನಾವೀನ್ಯ ರಸಗೊಬ್ಬರ ಮತ್ತು ರಸಗೊಬ್ಬರ ತಂತ್ರಜ್ಞಾನ ಸಂಶೋಧನೆ-1 ಹುದ್ದೆ ಇದೆ. ರಸಾಯನಶಾಸ್ತ್ರ ವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಬಿಎಸ್ಸಿ ಅಥವಾ ಕೃಷಿ ಪದವಿಯನ್ನು ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು.

ಕೃಷಿಕರ ಕಲ್ಯಾಣ ಕುರಿತು ಸಂಶೋಧನೆ-1 ಹುದ್ದೆ ಇದೆ. ಶೇ 50 ಅಂಕಗಳೊಂದಿಗೆ ಸಾಮಾಜಿಕ ವಿಜ್ಞಾನ ಪದವಿ ಪಾಸಾಗಿರಬೇಕು.

ಒಂದು ವರ್ಷ ಆಯಾ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 35 ವರ್ಷ.

ಮಾಸಿಕ ವೇತನ (ಸಂಚಿತ) 35,000/- ರೂ. ಇರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನ ಏರ್ಪಡಿಸಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​​ನಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಬರೆದು ಸೆಪ್ಟೆಂಬರ್ 14 ರೊಳಗೆ Director General (ICFFTR), C/o National Fertilizers Limited, A-11, Sector-24, Noida, District Gautam Budh Nagar, Uttar Pradesh -201301 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಮಾಹಿತಿಗೆ https://www.nationalfertilizers.com ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net