More

    ಅಂತಿಮ ಪರೀಕ್ಷೆ ಬರೆಯಲೇ ಬೇಕು; ಯುಜಿಸಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್​ ವ್ಯಾಖ್ಯಾನವೇನು?

    ನವದೆಹಲಿ: ಸೆಪ್ಟಂಬರ್​ 30 ರೊಳಗೆ ಅಂತಿಮ ಸೆಮಿಸ್ಟರ್​ ಹಾಗೂ ವರ್ಷದ ಪರೀಕ್ಷೆ ನಡೆಸಲೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜುಲೈ 6 ರಂದು ಹೊರಡಿಸಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್​ ಎತ್ತಿ ಹಿಡಿದಿದೆ.

    ಪದವಿ ಹಾಗು ಸ್ನಾತಕೋತ್ತರ ಕೋರ್ಸ್​ಗಳ ಅಂತಿಮ ಸೆಮಿಸ್ಟರ್​ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಶುಕ್ರವಾರ ತೀರ್ಪು ಪ್ರಕಟಿಸಿದೆ.

    ಇದನ್ನೂ ಓದಿ; ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!

    ಅಂತಿಮ ಸೆಮಿಸ್ಟರ್​​ ಅಥವಾ ವಾರ್ಷಿಕ ಪರೀಕ್ಷೆಯನ್ನು ಬರೆಯದೇ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಆದರೆ, ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ರಾಜ್ಯಗಳು ಯುಜಿಸಿಗೆ ಮನವಿ ಸಲ್ಲಿಸಬಹುದು ಎಂದು ಅವಕಾಶ ನೀಡಿದೆ.

    ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳನ್ನು ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಉತ್ತೀರ್ಣ ಮಾಡುವಂತಿಲ್ಲ. ಒಂದು ವೇಳೆ ಸೆಪ್ಟಂಬರ್​ 30 ರ ನಂತರ ಪರೀಕ್ಷೆ ನಡೆಸುವುದಾದರೆ, ಆ ಬಗ್ಗೆ ಯುಜಿಸಿಯನ್ನು ಸಂಪರ್ಕಿಸಬಹುದು ನ್ಯಾಯಮೂರ್ತಿ ಅಶೋಕ್​​ ಭೂಷಣ್​ ನೇತೃತ್ವದ ಎಂದು ಮೂವರು ಸದಸ್ಯರಿದ್ದ ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ; ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ 

    ಪ್ರಾಕೃತಿಕ ನಿರ್ವಹಣಾ ಘಟಕ ಒಂದು ರಾಜ್ಯದಲ್ಲಿ ಪರೀಕ್ಷೆ ನಡೆಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ನಿರ್ಧರಿಸಿದರೆ, ಯುಜಿಸಿ ನಿರ್ದೇಶನವನ್ನು ಕಡೆಗಣಿಸಿ ಬೇರೆ ದಿನಗಳಂದು ಪರೀಕ್ಷೆ ನಡೆಸಬಹುದು ಎಂದು ಹೇಳಿದೆ. ಒಟ್ಟಿನಲ್ಲಿ ಹೇಳುವುದಾದರೆ, ವಿಶ್ವ ವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ವಿಳಂಬವಾಗಿಯಾರೂ ಪರೀಕ್ಷೆಯನ್ನಂತೂ ನಡೆಸಲೇಬೇಕಿದೆ.

    ವಿಡಿಯೋ: 10 ಸಾವಿರ ಲೀಟರ್​ ಕೋಕಾ-ಕೋಲಾ ಬ್ಲಾಸ್ಟ್​ ಆದರೆ ಹೇಗಿರುತ್ತೆ…? 4 ವರ್ಷಗಳ ಶ್ರಮವಿದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts