More

    ನಾಲ್ಕು ವರ್ಷದ ಪದವಿ ವಿದ್ಯಾರ್ಥಿಗಳು ಎನ್​ಇಟಿ, ಪಿಎಚ್​.ಡಿಗೆ ಅವಕಾಶ!: ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್

    ನವದೆಹಲಿ: ನಾಲ್ಕು ವರ್ಷದ ಪದವಿಯಲ್ಲಿ ಶೇ. 75 ರಷ್ಟು ಅಂಕಗಳು ಇಲ್ಲವೇ ಸಮಾನ ಗ್ರೇಡ್​ ಪಡೆದ ವಿದ್ಯಾರ್ಥಿಗಳು ನೇರವಾಗಿ ರಾಷ್ಟ್ರೀಯ ಅರ್ಹತೆ ಪರೀಕ್ಷೆ ( ಎನ್​ಇಟಿ) ಮತ್ತು ಪಿಎಚ್​.ಡಿ ಅಧ್ಯಯನ ಕೈಗೊಳ್ಳಬಹುದು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

    ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಜೊತೆಗೆ ಅಥವಾ ಇಲ್ಲದೆಯೇ ಪಿಎಚ್‌ಡಿ ಮಾಡಲು, ಅಭ್ಯರ್ಥಿಗಳು ತಮ್ಮ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ ಶೇ.75 ಶೇಕಡಾ ಅಂಕಗಳು ಅಥವಾ ಸಮಾನ ಶ್ರೇಣಿಗಳನ್ನು ಹೊಂದಿರಬೇಕು.

    ಈವರೆಗಿನ ವ್ಯವಸ್ಥೆ ಪ್ರಕಾರ, ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ಎನ್​ಇಟಿ) ಅಧ್ಯಯನ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಶೇ.55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯಲ್ಲಿ ಪಡೆಯಬೇಕಿತ್ತು.

    “ನಾಲ್ಕು ವರ್ಷದ ಪದವಿಯಲ್ಲಿ ಯಾವುದೇ ವಿಷಯಗಳನ್ನು ಅಧ್ಯಯನ ಮಾಡಿದ್ದರೂ ನಿಗದಿಪಡಿಸಿದ ಅಂಕಗಳು ಅಥವಾ ಗ್ರೇಡ್​ ಪಡೆದ ಅಭ್ಯರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಅಧ್ಯಯನ ಮತ್ತು ಎನ್​ಇಟಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾಲ್ಕು ವರ್ಷ ಅಥವಾ ಎಂಟು-ಸೆಮಿಸ್ಟರ್ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪಾಸಾದ ಅಭ್ಯರ್ಥಿಗಳು ಒಟ್ಟು ಶೇ. 75% ಅಂಕಗಳನ್ನು ಹೊಂದಿರಬೇಕು.

    ಯುಜಿಸಿಯ ನಿರ್ಧಾರದ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ, ವಿಕಲಚೇತನರು, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ಯುಜಿಸಿ ನಿರ್ಧಾರದ ಪ್ರಕಾರ ಅಂಕಗಳಲ್ಲಿ ಶೇ.5 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ.

    ಹಿಂದೂ ಹುಡುಗಿಯರನ್ನು ಲವ್ ​ಯಾಕೆ ಮಾಡ್ತೀರಿ..? ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ: ಪ್ರಥಮ್​ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts