ಬೆಂಗಳೂರು ಬಿಇಎಲ್ ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ

BEL
Published on

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಭಾರತದ ಪ್ರಮುಖ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್ ಬೆಂಗಳೂರು) ಟ್ರೇನಿ ಇಂಜಿನಿಯರ್ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಿದೆ.

ಟ್ರೇನೀ ಇಂಜಿನಿಯರ್1 ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ -16 ಹಾಗೂ ಮೆಕಾನಿಕಲ್ - 4 ಹುದ್ದೆಗಳಿವೆ.

ಪ್ರಾಜೆಕ್ಟ್ ಇಂಜಿನಿಯರ್ 1 ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ -16 ಹಾಗೂ ಮೆಕಾನಿಕಲ್ - 14 ಹುದ್ದೆಗಳಿವೆ.

ಸಂಬಂಧಿಸಿದ ವಿಭಾಗದಲ್ಲಿ ಬಿಇ/ ಬಿಟೆಕ್ ಪಾಸಾದವರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ, ವಯೋಮಿತಿ, ಇತ್ಯಾದಿ ವಿವರಗಳಿಗೆ ವೆಬ್​ಸೈಟ್​ನಲ್ಲಿರುವ ಅಧಿಸೂಚನೆ ನೋಡಬಹುದು. ಆಗಸ್ಟ್ 2 ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ http://bel-india.in ವೆಬ್​ಸೈಟ್ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net