More

    ಭಾರತಕ್ಕೆ ಫ್ರಾನ್ಸ್​​​ ವಿಶೇಷ ಕೊಡುಗೆ – ವೆಂಟಿಲೇಟರ್, ಟೆಸ್ಟಿಂಗ್ ಕಿಟ್​

    ನವದೆಹಲಿ:ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು ಮುಂದಾಗಿರುವ ಫ್ರಾನ್ಸ್, ಭಾರತಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ.
    ಸೋಮವಾರ ಫ್ರೆಂಚ್ ವಾಯುಪಡೆಯ ವಿಮಾನವು ಭಾರತಕ್ಕೆ ಬರಲಿದ್ದು, ಇದರೊಂದಿಗೆ ಉತ್ಕೃಷ್ಟ ಮಟ್ಟದ ವೆಂಟಿಲೇಟರ್ ಮತ್ತು ಸೆರಾಲಜಿಕಲ್ ಕಿಟ್​​ಗಳನ್ನು ಹೊತ್ತು ತರಲಿದೆ ಎಂದು ಇಂದು ಫ್ರಾನ್ಸ್ ರಾಯಭಾರಿ ಇಮ್ಯಾನುವೆಲ್ ಲೆನಿನ್ ತಿಳಿಸಿದ್ದಾರೆ.
    ಈ ಕುರಿತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಲೆನಿನ್ ತಿಳಿಸಿದ್ದಾರೆ.
    ತಮ್ಮ ದೇಶವು ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ನೀಡುವುದರೊಂದಿಗೆ ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳುತ್ತಿದೆ ಎಂದು ರಾಯಭಾರಿ ಹೇಳಿದರು.

    ಇದನ್ನೂ ಓದಿ:  ಸರ್ಕಾರ ಆದೇಶಿಸಿದರೆ ರಾಮಮಂದಿರಕ್ಕೆ ಸೂಕ್ತ ಭದ್ರತೆ ಒದಗಿಸಲು ಸಿದ್ಧ: ಸಿಆರ್​ಪಿಎಫ್ ಡಿಜಿ

    ಭಾರತದಲ್ಲಿ COVID-19 ಸಾವಿನ ಪ್ರಮಾಣವು ಇಳಿಮುಖವಾಗುತ್ತಿದ್ದು ಪ್ರಸ್ತುತ ಇದರ ಪ್ರಮಾಣ ಪ್ರಸ್ತುತ ಶೇಕಡಾ 2.28 ರಷ್ಟಿದೆ. ಮರಣ ಪ್ರಮಾಣವು ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
    ತುರ್ತು ಪರೀಕ್ಷೆ ಹಾಗೂ ಪರಿಣಾಮಕಾರಿ ನಿಯಂತ್ರಣ ತಂತ್ರಗಳಿಂದ ಸಾವಿನ ಪ್ರಕರಣಗಳು ಕಡಿಮೆಯಾಗುತ್ತಿವೆ.
    ದೇಶದ ಚೇತರಿಕೆಯ ಪ್ರಮಾಣವು ಹಂತಹಂತವಾಗಿ ಸುಧಾರಿಸುತ್ತಿದೆ. ಒಟ್ಟಾರೆ ಚೇತರಿಕೆ ಪ್ರಮಾಣ ಈಗ ಒಂಬತ್ತು ಲಕ್ಷಕ್ಕೂ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.

    ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts