ಸರ್ಕಾರ ಆದೇಶಿಸಿದರೆ ರಾಮಮಂದಿರಕ್ಕೆ ಸೂಕ್ತ ಭದ್ರತೆ ಒದಗಿಸಲು ಸಿದ್ಧ: ಸಿಆರ್​ಪಿಎಫ್ ಡಿಜಿ

CRPF
Published on

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರ ಹೊಸದಾಗಿ ಯಾವುದೇ ಆದೇಶ ನೀಡಿಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಎ ಪಿ ಮಹೇಶ್ವರಿ ಸೋಮವಾರ ತಿಳಿಸಿದ್ದಾರೆ.
ಸಿಆರ್​ಪಿಎಫ್ ನ 82ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಹಾಜರಿದ್ದ ಅವರು 'ರಾಮ ಮಂದಿರಕ್ಕೆ ಸಿಆರ್​ಪಿಎಫ್ ಭದ್ರತೆ ಒದಗಿಸುತ್ತದೆಯೇ' ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ರಾಮ ಮಂದಿರದ ಭದ್ರತೆಯ ಬಗ್ಗೆ ಯಾವುದೇ ಹೊಸ ಆದೇಶವನ್ನು ಹೊರಡಿಸಲಾಗಿಲ್ಲ. ಸರ್ಕಾರವು ಅಂತಹ ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ನೀಡಿದರೆ, ಸಿಆರ್​​​ಪಿಎಫ್ ತನ್ನ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂದು ಅವರು ಹೇಳಿದರು.


ರಾಮ್ ಮಂದಿರದ ಸುರಕ್ಷತೆಯ ಬಗ್ಗೆ ಸರ್ಕಾರ ಶೀಘ್ರದಲ್ಲೇ ತೀರ್ಮಾನಿಸಲಿದೆ ಮತ್ತು ಸಿಆರ್​​ಪಿಎಫ್ ಗೆ ಈ ಜವಾಬ್ದಾರಿ ಒದಗಿಬರುವ ಸಾಧ್ಯತೆಯಿದೆ. ಸದ್ಯ ಇದು ವೈಷ್ಣೋ ದೇವಿ ದೇವಸ್ಥಾನಕ್ಕೂ ಭದ್ರತೆ ಒದಗಿಸುತ್ತಿದೆ. ಸಿಆರ್​​ಪಿಎಫ್ ನಂತರ, ಕೇಂದ್ರ ಗೃಹ ಸಚಿವಾಲಯದ ಕಟ್ಟಡ ಸೇರಿದಂತೆ ಎಲ್ಲಾ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಭದ್ರತೆ ಒದಗಿಸಿರುವ ಸಿಐಎಸ್ಎಫ್ ಗೆ ಮಂದಿರದ ಭದ್ರತಾ ಜವಾಬ್ದಾರಿ ಒದಗಿಬರುವ ಸಾಧ್ಯತೆಯೂ ಇದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net