ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ.... ಈ ಸಾವಿನ ಹಿಂದೆ ಯಾರಿದ್ದಿರಬಹುದು?

suicide
Published on

ಗಾಜಿಯಾಬಾದ್: ಮಹಿಳೆಯ ಮೃತ ದೇಹವಿರುವ ಸೂಟ್‌ಕೇಸ್‌ ಒಂದು ಇಲ್ಲಿಯ ದಾಶ್‌ಮೆಶ್ ವಾಟಿಕಾ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿದೆ.

ಮೃತ ದೇಹವನ್ನು ಬ್ರೀಫ್​​ಕೇಸ್ ನಲ್ಲಿ ತೂರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ, ಮಹಿಳೆಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳಿರುವುದು ಹಲ್ಲೆ ನಡೆದಿರಬಹುದೆಂಬ ಸಂಶಯ ಮೂಡಿಸಿದೆ.

ಮಹಿಳೆ ವಿವಾಹಿತಳಾಗಿದ್ದು, ಈ ಘಟನೆಯ ಹಿಂದೆ ಆಕೆಯ ಸಂಬಂಧಿಯೊಬ್ಬರು ಇದ್ದಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಗರ ಪೊಲೀಸ್ ಅಧೀಕ್ಷಕ ಮನೀಶ್ ಮಿಶ್ರಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net