

ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ( ಈ ಹಿಂದಿನ ಈಕರಸಾ ಸಂಸ್ಥೆಯ)ದಲ್ಲಿ ಖಾಲಿಯಿರುವ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಮೂಲ ದಾಖಲಾತಿಗಳ ಪರಿಶೀಲನೆಯ ಸಮಯದಲ್ಲಿ ಚಾಲನಾ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾತ್ರ 3-07-2023ರಿಂದ ಚಾಲನಾ ಪರೀಕ್ಷೆಯನ್ನು ಕಕರಸಾ ನಿಗಮದ "ಪ್ರಾದೇಶಿಕ ತರಬೇತಿ ಕೇಂದ್ರ-ಹುಮನಾಬಾದ''ನಲ್ಲಿ ಆರಂಭಿಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ವಿಳಾಸ: kkrtcjobs .karnataka.gov.in/drivingtest ಗೆ ಭೇಟಿ ನೀಡಿ, ತಮ್ಮ ಕರೆಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು, ಕರೆ ಪತ್ರದಲ್ಲಿ ನಮೂದಿಸಲಾದ ದಿನಾಂಕದಂದು ತಪ್ಪದೇ ಪರೀಕ್ಷಾ ಸ್ಥಳದಲ್ಲಿ ಹಾಜರಿರಲು ಸೂಚಿಸಲಾಗಿದೆ. ಅಲ್ಲದೆ ನಿಗಮದ ಸಹಾಯವಾಣಿ ಸಂಖ್ಯೆ 6366374977/08472-227687 ಗಳಿಗೂ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.