ನಟಿ ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫಿಕ್ಸ್; ಕೊಡವರ ಸಂಪ್ರದಾಯದಂತೆ ಆಗಸ್ಟ್ 24 ರಂದು ನಡೆಯಲಿದೆ ವಿವಾಹ

Harshika Poonacha
Published on

ಕೊಡಗು: ಸ್ಯಾಂಡಲ್​ವುಡ್​​​ ನಟಿ ಹರ್ಷಿಕಾ ಪೂಣಚ್ಚ ಅವರು ನಟ ಭುವನ್ ಪೊನ್ನಣ್ಣ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಅವರ ಮದುವೆ ಆಗಸ್ಟ್ 24 ರಂದು ನಡೆಯಲಿದೆ. ಕೊಡವರ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ತಾರೆಯರು ಪಾಲ್ಗೊಳ್ಳುವ ನೀರಿಕ್ಷೆ ಇದೆ.

ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಕೊಡಗಿನಲ್ಲಿ ಸರಳವಾಗಿ ನಡೆದಿದೆ. ಈ ಕಾರ್ಯದ ವೇಳೆ ಎರಡೂ ಕುಟುಂಬದ ಕೆಲವರು ಮಾತ್ರ ಭಾಗಿಯಾಗಿದ್ದರು. ಆಗಸ್ಟ್ 24 ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆಯಲ್ಲಿರುವ ವಿವಾಹವಾಗಿದೆ. ಮದುವೆಯ ಆಮಂತ್ರಣ ಪತ್ರಿಕೆಯೂ ಸಿದ್ಧವಾಗಿದೆ.

ಹರ್ಷಿಕಾ ಪೂಣಚ್ಚ, ಮುಗ್ಧ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ. ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನ ತಾವೂ ತೊಡಗಿಸಿಕೊಂಡು, ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಕಷ್ಟದಲ್ಲಿದ್ದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆ. ಬಿಗ್​ಬಾಸ್​ ಖ್ಯಾತಿಯ ನಟ ಭುವನ್ ಅವರ ಭುವನಂ ಸಂಸ್ಥೆಯ ಜೊತೆ ಕೈ ಜೋಡಿಸಿರುವ ಹರ್ಷಿಕಾ ರಾಜ್ಯದ ವಿವಿಧ ಭಾಗಗಳಲ್ಲಿ, ಹಲವಾರು ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರ ಕೈ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net