ನೈಋತ್ಯ ರೈಲ್ವೆಯಲ್ಲಿದೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆಗೆ ಜ.16 ಕೊನೇ ದಿನ

hubli train
Published on

ನೈಋತ್ಯ ರೈಲ್ವೆ ಕ್ರೀಡಾ ಕೋಟದಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುಬ್ಬಳ್ಳಿ ಅಥವಾ ಕರ್ನಾಟಕ ಭಾಗದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜ.16ರ ಒಳಗೆ ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 21

ಸ್ಥಳ: ಹುಬ್ಬಳ್ಳಿ

ಹುದ್ದೆಗಳ ವಿವರ

ಬಾಸ್ಕೆಟ್​ ಬಾಲ್​-2

ಚೆಸ್​- 1

ವಾಟರ್​ ಪೋಲೋ-3

ಅಥ್ಲೆಟಿಕ್ಸ್​-3

ಬ್ಯಾಡ್ಮಿಂಟನ್​- 1

ಕ್ರಿಕೆಟ್​- 5

ಗಲ್ಫ್​- 1

ವೇಟ್​ ಲಿಫ್ಟಿಂಗ್​- 1

ಸ್ವಿಮ್ಮಿಂಗ್-1

ಟೇಬಲ್​ ಟೆನ್ನಿಸ್-​ 1

ವಾಲಿ ಬಾಲ್​- 2

ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಎಸ್​ಎಸ್​ಎಲ್​ಸಿ, ಪಿಯುಸಿ, ಬಿಎಸ್​ಸಿ ಪದವಿ ಅಥವಾ ತತ್ಸಮಾನ ಕೋರ್ಸ್​ ವ್ಯಾಸಂಗ ಮಾಡಿರಬೇಕು. ಅಂತಿಮ ಪರೀಕ್ಷೆಗೆ ಹಾಜರಾಗುತ್ತಿರುವರು ಅಥವಾ ಅಂತಿಮ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಯೋಮಿತಿ: ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18, ಗರಿಷ್ಠ ವಯಸ್ಸು 25 ಹೊಂದಿರಬೇಕು. ನೈಋತ್ಯ ರೈಲ್ವೆ ಮಾನದಂಡಗಳ ಪ್ರಕಾರ ವಯೋ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ: 500 ರೂ. ಅರ್ಜಿ ಶುಲ್ಕ ಅನ್ವಯವಾಗಲಿದೆ. ಆದರೆ ಎಸ್​ಸಿ/ಎಸ್​ಟಿ/ಮಹಿಳೆಯರು/ಮಾಜಿ ಸೈನಿಕರು/ಅಲ್ಪಸಂಖ್ಯಾತರು/ಒಬಿಸಿ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸರಿಯಾದ ಇಮೇಲ್​ ಐಡಿ ಮತ್ತು ಮೊಬೈಲ್​ ಸಂಖ್ಯೆ ನಮೂದಿಸಬೇಕು. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಭಾವಚಿತ್ರ, ರೆಸ್ಯೂಮ್​, ಇತ್ಯಾದಿ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಅಧಿಸೂಚನೆಯಲ್ಲಿ ತಿಳಿಸಿರುವ ಲಿಂಕ್​ನಿಂದ ಅರ್ಜಿಯನ್ನು ಡೌನ್​ಲೋಡ್​ ಮಾಡಿಕೊಂಡು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ. ಅರ್ಜಿ ಶುಲ್ಕ ಪಾವತಿಸಿ. ಎಲ್ಲ ಮಾಹಿತಿ ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ನಂತರ ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Assistant Personnel Officer/Rectt., Railway Recruitment Cell, 2nd floor, Old G.M.’s Office Building, Club Road, Hubballi-580023 ಇಲ್ಲಿಗೆ ಜ.16ರ ಒಳಗೆ ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 16.01.2023

ಅಧಿಸೂಚನೆಗೆ: https://bit.ly/3PKbwOE

ಹೆಚ್ಚಿನ ಮಾಹಿತಿಗಾಗಿ: swr.indianrailways.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net