ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು: ಸಾಧ್ವಿ ಪ್ರಜ್ಞಾ

Pragya Singh Thakur
Published on

ಶಿವಮೊಗ್ಗ: ಮನೆಯಲ್ಲಿ ಆಯುಧಗಳನ್ನು ಇರಿಸಿ. ಅವು ಹರಿತವಾಗಿರಲಿ. ಬಂದೂಕಿಗೆ ಪರವಾನಗಿ ಪಡೆಯೋದನ್ನ ಮರೆಯದಿರಿ. ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು ಎಂದು ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈಮಾಸಿಕ ಪ್ರಾಂತ್ಯ ಸಮ್ಮೇಳನದಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನಾನು ಸಂಸದೆ ಆಗಿರೋದೋ ಹಿಂದು ಧರ್ಮಕ್ಕಾಗಿ, ನನ್ನ ಕೊನೆಯುಸಿರು ಇರುವತನಕ ಹಿಂದು ಧರ್ಮದ ಪರವಾಗಿಯೇ ಮಾತನಾಡುವೆ, ಹೋರಾಡುವೆ ಎನ್ನುತ್ತಾ ಭಾಷಣದುದ್ದಕ್ಕೂ ಲವ್​ ಜಿಹಾದ್​ ವಿರುದ್ಧ ಆಕ್ರೋಶ ಹೊರಹಾಕಿದರು. ತರಕಾರಿ ಕತ್ತರಿಸೋ ಚಾಕು ಇದೆಯಲ್ವಾ ಮನೇಲಿ? ತರಕಾರಿಗಳನ್ನು ಚೆನ್ನಾಗಿ ಕತ್ತರಿಸಬಹುದು ಎಂದಾದರೆ ಅಂತಹ ಚಾಕುಗಳಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು... ಎಂದರು.

ತಮ್ಮ ರಕ್ಷಣೆಯನ್ನೇ ತಾವೇ ಮಾಡಿಕೊಳ್ಳುವ ಮಟ್ಟಕ್ಕೆ ಹೆಣ್ಮಕ್ಕಳು ಬೆಳೆಯಬೇಕು. ಅದಕ್ಕಾಗಿ ಹೆಣ್ಣು ಮಕ್ಕಳನ್ನು ಜಾಗೃತಗೊಳಿಸಬೇಕು, ನಮ್ಮ ಹೆಣ್ಣುಮಕ್ಕಳನ್ನು ನಡೆದಾಡುವ ಆಟಂ ಬಾಂಬ್​ಗಳಂತೆ ರೂಪಿಸಬೇಕು. ಯಾವ ಸಮಯ ಬರುತ್ತೋ ಗೊತ್ತಿಲ್ಲ. ಹೆಣ್ಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಹರಿತವಾಗಿ ಇಟ್ಟುಕೊಳ್ಳಬೇಕು. ಅದರಿಂದ ಶತ್ರುಗಳ ತಲೆಯನ್ನೂ ಕತ್ತರಿಸಬಹುದು. ಅವರವರ ಆತ್ಮರಕ್ಷಣೆಗೆ ಅವರೇ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net