ಬಡತನ ಹೋಗಲಾಡಿಸಲು ಉದ್ಯೋಗಸೃಷ್ಠಿ ಮಾಡಬೇಕೆ ವಿನಾ ಉಚಿತ ಕೊಡುಗೆಗಳಲ್ಲ; ನಾರಾಯಣ ಮೂರ್ತಿ | freebies

dk - 2025-03-13T125758.269
Published on

freebies: ನವೀನ ಉದ್ಯಮಿಗಳಿಂದ ಉದ್ಯೋಗಸೃಷ್ಠಿಯು ಭಾರತದಲ್ಲಿ ಬಡತನ ತೊಡೆದು ಹಾಕಲು ಸಾಧ್ಯವೇ ವಿನಾ ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದರಿಂದ ಅಲ್ಲ ಎಂದು ಇನ್ಫೋಸಿಸ್ ಸಹ-​ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಈ ಕುರಿತು ಮುಂಬೈನಲ್ಲಿ ನಡೆದ 'ಟೈಟಾನ್​ ಮುಂಬೈ 2025' ಕಾರ್ಯಕ್ರಮದಲ್ಲಿ ಮಾತನಾಡಿದ್ದರೆ ಎಂದು ಪಿಟಿಐ ವರದಿ ಮಾಡಿದೆ.

''ನೀವು ಪ್ರತಿಯೊಬ್ಬರು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿ ಮಾಡುತ್ತೀರಿ ಎಂಬುದು ನನಗೆ ಯಾವುದೇ ಸಂದೇಹವಿಲ್ಲ. ಆದರೆ, ನೀವು ಬಡತನದ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ ಎಂಬುದು ಮುಖ್ಯ. ನೀವು ಉಚಿತ ಕೊಡುಗೆಗಳಿಂದ ಬಡತನದ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಉಚಿತ ಕೊಡುಗೆಗಳು ಯಾವುದೇ ದೇಶ ಯಶಸ್ವಿಯಾಗಿಲ್ಲ" ಎಂದು ಮೂರ್ತಿ ಹೇಳಿದರು.

ಭಾರತದಲ್ಲಿ ಚುನಾವಣೆಗೆ ಮುನ್ನ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸರ್ವ ಪ್ರಯತ್ನ ಮಾಡುವ ಉಚಿತ ಕೊಡುಗೆಗಳ ಸಂಸ್ಕೃತಿಯ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ ಅವರ ಹೇಳಿಕೆಗಳು ಬಂದಿವೆ. ಇನ್ನು ಈ ಉಚಿತ ಕೊಡುಗೆಗಳ ಪ್ರವೃತ್ತಿಯ ತಡೆಯಲು ಕೋರಿ ಸಲ್ಲಿಸಲಾದ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net