ಮಡದಿ ಮಡಿಲಲ್ಲಿ ಮಲಗುವ ಮೂಲಕ ಬೇಬಿ ಬಂಪ್​ PhotoShoot; ರಾಹುಲ್​ & ಅಥಿಯಾ ಫೋಟೋಗೆ ಫೋಸ್​​​

dk - 2025-03-12T203554.817
Published on

Photoshoot: ಕೆ.ಎಲ್​.ರಾಹುಲ್​​, ಅಥಿಯಾ ಶೆಟ್ಟಿ ದಂಪತಿಗಳು ಬೇಬಿ ಬಂಪ್​ ಫೋಟೋ ಶೂಟ್​ ಮಾಡಿಸಿದ್ದು, ಮೊದಲ ಮಗುವಿನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.

ಹೌದು, ತಮ್ಮ ಸರಳ ಹಾಗೂ ರೋಮ್ಯಾಂಟಿಕ್ ಶೈಲಿಗೆ ಹೆಸರುವಾಸಿಯಾದ ಈ ದಂಪತಿಗಳು ಮಾಡಿಸಿದ ಮುದ್ದಾದ ಫೋಟೋಗಳು ಇಂಟರ್ನೆಟ್​​ನಲ್ಲಿ ಭಾರೀ ವೈರಲ್​ ಆಗಿವೆ.

ವೈರಲ್​ ಫೋಟೋಗಳಲ್ಲಿ ಏನಿದೆ..?

ಈ ಫೋಟೋದಲ್ಲಿ ದಂಪತಿಗಳ ಅತ್ಯಂತ ಆತ್ಮೀಯ ಮತ್ತು ಸಂತೋಷದ ಕ್ಷಣಗಳನ್ನು ಸೆರೆಹಿಡಿದಿವೆ. ಅಲ್ಲದೆ, ಕೆ.ಎಲ್.ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಅವರನ್ನು ಹತ್ತಿರದಿಂದ ಹಿಡಿದಿಟ್ಟುಕೊಂಡಿರುವಾಗ ಅತಿಯಾ ಅವರ ಹೊಟ್ಟೆಯನ್ನು ತಬ್ಬಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡಯುತ್ತಿರುವ ಹಾಗೂ ಅತಿಯಾ ನಯವಾದ ಕಪ್ಪು ಗೌನ್‌ನಲ್ಲಿ ತಾಯಿಯಾಗಲಿರುವವರು ನಗು ಮುಖ ಫೋಟೊಗಳಲ್ಲಿ ಕಾಣಸಿಗುತ್ತದೆ.

2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಶಕ್ತಿ ರಾಹುಲ್​-ಅಥಿಯಾ ದಂಪತಿಗಳು, ಕಳೆದ ವರ್ಷ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಮೊದಲ ಮಗುವಿನ ಘೋಷಣೆ ಮಾಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net