ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಶೇಖರ್ ಮಾಸ್ಟರ್; ಕೇತಿಕಾ ಶರ್ಮಾ ಅವರ 'ಅಧಿ ಧಾ' ಹಾಡನ್ನು ನಿಷೇಧಿಸುವಂತೆ ಪಟ್ಟು | Adhi dha surprisu

Untitled design - 2025-03-12T184916.346
Published on

ಕೆಲ ತಿಂಗಳ ಹಿಂದೆ, ಊರ್ವಶಿ ರೌಟೇಲಾ ಮತ್ತು ನಂದಮೂರಿ ಬಾಲಕೃಷ್ಣ ಅವರ 'ದಬಿದಿ ದಿಬಿದಿ' ಹಾಡಿನ ನೃತ್ಯ ಸಂಯೋಜನೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅದರ ನೃತ್ಯದ ಹೆಜ್ಜೆಗಳನ್ನು ಅಶ್ಲೀಲವೆಂದು ಹೇಳಲಾಗುತಿತ್ತು. ಈಗ ಶ್ರೀಲೀಲಾ ಮತ್ತು ನಿತಿನ್ ಅಭಿನಯದ 'ರಾಬಿನ್ ಹುಡ್' ಚಿತ್ರದ 'ಅಧಿ ಧಾ ಸರ್ಪ್ರೈಸು’(Adhi dha surprisu) ಹಾಡಿನಲ್ಲಿಯೂ ಇದೇ ರೀತಿಯದ್ದು ಕಂಡುಬಂದಿದೆ.

ಇತ್ತೀಚೆಗೆ ಬಿಡುಗಡೆಯಾದ ಈ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಸಾಹಿತ್ಯ ಮತ್ತು ಕೇತಿಕಾ ಶರ್ಮಾ ಅವರ ನೃತ್ಯದ ಹೆಜ್ಜೆಗಳನ್ನು ಅಶ್ಲೀಲ ಎಂದು ಕರೆಯಲಾಗುತ್ತಿದ್ದು, ಹಾಡನ್ನು ನಿಷೇಧಿಸುವ ಬೇಡಿಕೆ ಇದೆ. ಇದರೊಂದಿಗೆ ಶೇಖರ್ ಮಾಸ್ಟರ್ ಈಗ ನಿವೃತ್ತರಾಗಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

'ಅಧಿ ಧಾ ಸರ್ಪ್ರೈಸು’ ಹಾಡಿನ ವಿಡಿಯೋ ಮಾರ್ಚ್ 10ರಂದು ಬಿಡುಗಡೆಯಾಯಿತು. ಈ ಹಾಡಿನಲ್ಲಿ ಕೆಲವು ನೃತ್ಯ ಹೆಜ್ಜೆಗಳಿವೆ. ಅದು ನೋಡುಗರನ್ನು ಕೆರಳಿಸಿದ್ದು ಇದು ಅಶ್ಲೀಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ನೀತಿ ಮೋಹನ್ ಮತ್ತು ಅನುರಾಗ್ ಕುಲಕರ್ಣಿ ಹಾಡಿರುವ ಈ ಹಾಡಿನ ಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ಮಹಿಳೆಯನ್ನು ವಸ್ತುನಿಷ್ಠವಾಗಿ ಚಿತ್ರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಶೇಖರ್ ಮಾಸ್ಟರ್ ಅವರನ್ನು ಟ್ರೋಲ್ ಮಾಡಿ, 'ಶೇಖರ್ ಮಾಸ್ಟರ್ ದಯವಿಟ್ಟು ನಿವೃತ್ತಿ ಹೊಂದಿ' ಎಂದು ಬರೆದಿದ್ದಾರೆ. ಇದು ಒಂದು ಸಿನಿಮಾ, ಪ್ರೇಕ್ಷಕರು ಇದರಲ್ಲಿ ಕಮರ್ಷಿಯಲ್​​ ಅಂಶಗಳ ಜತೆಗೆ ಪ್ರಣಯ ದೃಶ್ಯಗಳು ಅಥವಾ ಹಾಡುಗಳನ್ನು ನಿರೀಕ್ಷಿಸುತ್ತಾರೆ. ಆದರೆ ನೀವು ಮಾಡುತ್ತಿರುವುದು ಪ್ರಣಯ ಅಥವಾ ಕಮರ್ಷಿಯಲ್​​ ಅಲ್ಲ. ನಿಮ್ಮ ನೃತ್ಯ ಸಂಯೋಜನೆಯನ್ನು ಪರದೆಯ ಮೇಲೆ ನೋಡುವುದು ಅಸಹ್ಯಕರವಾಗಿದೆ. ದಯವಿಟ್ಟು ನಿವೃತ್ತಿ ಪಡೆಯಿರಿ ಎಂದು ಆಗ್ರಹಿಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net