ಸದಾ ವಿವಾದಕ್ಕೆ ಹೆಸರಾಗಿರುವ ಜೆಎನ್​ಯುದಿಂದ ಒಂದೊಳ್ಳೆ ಹೆಜ್ಜೆ; ಕರೊನಾ ವಿರುದ್ಧ ಹೋರಾಟಕ್ಕೆ ಒಂದು ದಿನದ ವೇತನ ಮೀಸಲು

JNU
Published on

ನವದೆಹಲಿ: ಕರೋನಾ ವೈರಸ್​ ವಿರುದ್ಧದ ಹೋರಾಟಕ್ಕೆ ಜವಾಹರ್​ಲಾಲ್​ ನೆಹರೂ ವಿಶ್ವವಿದ್ಯಾಲಯ ತನ್ನ ಬೋಧಕ & ಬೋಧಕೇತರ ಸಿಬ್ಬಂದಿ ಏಪ್ರಿಲ್​ ತಿಂಗಳ ಒಂದು ದಿನದ ವೇತನವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಈ ಕುರಿತು ಮಾತನಾಡಿದ ವಿವಿ ಉಪಕುಲಪತಿ ಎಂ.ಜಗದೀಶ್​ ಕುಮಾರ್​, ಕರೊನಾ ಮಹಾಮಾರಿ ಎದುರಿಸಲು ದೇಶ ನಡೆಸುತ್ತಿರುವ ಹೋರಾಟದಲ್ಲಿ ನಮ್ಮ ಜೆಎನ್​​ಯು ಪಾತ್ರವೂ ಇರಲಿ. ನಾವೆಲ್ಲ ಸ್ವಯಂ ಇಚ್ಛೆಯಿಂದ ಒಂದು ದಿನದ ವೇತನವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net