ಸ್ಪೈಸ್​ ಜೆಟ್​ನಲ್ಲಿ ಮೊದಲ ಕರೊನಾ ವೈರಸ್​ ಪ್ರಕರಣ; ಮಾ.21ರಂದು ಚೆನ್ನೈ-ದೆಹಲಿ ವಿಮಾನ ಆಪರೇಟ್​ ಮಾಡಿದ್ದ ಓರ್ವ ಪೈಲಟ್​ಗೆ ಸೋಂಕು

Coronavirus 27 Feb 20
Published on

ನವದೆಹಲಿ: ಸ್ಪೈಸ್​ ಜೆಟ್​ ಪೈಲಟ್​ ಓರ್ವನಿಗೆ ಕರೊನಾ ವೈರಸ್​ ತಗುಲಿದೆ. ಆದರೆ ಈ ಪೈಲಟ್​ ಮಾರ್ಚ್​ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಾರ್ಯನಿರ್ವಹಿಸಿರಲಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಸ್ಪೈಸ್​ಜೆಟ್​ನಲ್ಲಿ ಪ್ರಥಮ ಕೋವಿಡ್​-19 ಪ್ರಕರಣ ಪತ್ತೆಯಾಗಿದೆ. ನಮ್ಮ ಓರ್ವ ಪೈಲಟ್​​ಗೆ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಚ್​ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲೂ ಕಾರ್ಯ ನಿರ್ವಹಣೆ ಮಾಡಿರಲಿಲ್ಲ. ಹಾಗಿದ್ದಾಗಿ ಕೂಡ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಲಾಗಿತ್ತು. ಮಾ.28ರಂದು ವೈದ್ಯಕೀಯ ವರದಿ ಬಂದಿದ್ದು, ಕರೊನಾ ಇರುವುದು ದೃಢಪಟ್ಟಿದೆ ಎಂದು ಸ್ಪೈಸ್​ಜೆಟ್​ನ ವಕ್ತಾರ ತಿಳಿಸಿದ್ದಾರೆ.

ಈ ಪೈಲಟ್​ ಕೊನೇದಾಗಿ ಮಾರ್ಚ್​ 21ರಂದು ಚೆನ್ನೈ-ದೆಹಲಿ ವಿಮಾನದಲ್ಲಿ ಕಾರ್ಯ ನಿರ್ವಹಿಸಿದ್ದ. ಅವತ್ತಿನಿಂದಲೇ ಆತನನ್ನು ಕ್ವಾರೆಂಟೈನ್​ನಲ್ಲಿ ಇಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆ ವಿಮಾನದ ಎಲ್ಲ ಸಿಬ್ಬಂದಿ, ಪೈಲಟ್​ ಸಂಪರ್ಕಕ್ಕೆ ಹೋಗಿರುವ ಮಂದಿಯನ್ನೆಲ್ಲ ಕ್ವಾರೆಂಟೈನ್​ನಲ್ಲಿ ಇಡಲಾಗಿದೆ. ಮುಂದಿನ 14 ದಿನ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net