ಗುಡ್ ನ್ಯೂಸ್...! ಜಮ್ಮು ಕಾಶ್ಮೀರ ಕೆಲಸಗಾರರಿಗೆ 3 ಕೋಟಿ ರೂ. ಧನಸಹಾಯ

farook
Published on

ಶ್ರೀನಗರ: ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಫಾರೂಕ್ ಖಾನ್ ಜಮ್ಮು ಮತ್ತು ಕಾಶ್ಮೀರ ವಿವಿಧ ಜಿಲ್ಲೆಗಳ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಧನ ಸಹಾಯಾರ್ಥ 3 ಕೋಟಿ ರೂ. ಬಿಡುಗಡೆಗೆ ಅನುಮತಿ ನೀಡಿದ್ದಾರೆ.

ಸಾವು / ಅಂತಿಮ ಸಂಸ್ಕಾರಕ್ಕೆ ಸಹಾಯ ಮತ್ತು ದೀರ್ಘ ಕಾಲೀನ ರೋಗಿಗಳಿಗೆ ಧನ ಸಹಾಯ ಯೋಜನೆಯಡಿ ಇದಕ್ಕೆ ಅನುಮತಿ ನೀಡಲಾಗಿದೆ.

ಅನುಮೋದಿತ ಮೊತ್ತವನ್ನು ಜಮ್ಮು ಮತ್ತು ಕಾಶ್ಮೀರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (ಜೆಕೆಬಿಒಸಿಡಬ್ಲ್ಯುಬಿ)ಯ ಯೋಜನೆಯಡಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಈ ಯೋಜನೆಯಡಿ, ಸಾವಿನ ಪ್ರಕರಣಗಳಿಗೆ 110 ಹಾಗೂ ದೀರ್ಘ ಕಾಲೀನ ಕಾಯಿಲೆ ಮತ್ತು ಗಾಯಗೊಂಡ ಪ್ರಕರಣಗಳಿಗೆ 63 ಸೇರಿ 173 ಪ್ರಕರಣಗಳಿಗೆ ಸಲಹೆಗಾರ ಅನುಮೋದನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net